2ಜಿ ತೀರ್ಪು: ಮಾಜಿ ಸಿಎಜಿ ವಿನೋದ್ ರಾಯ್ ವಿವರಣೆ ನೀಡಬೇಕು: ಶಿವಸೇನೆ
2 ಜಿ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಬಿಜೆಪಿಗೆ ದೊರೆತ ತಪರಾಕಿ ಎಂದು ಹೇಳಿರುವ ಶಿವಸೇನೆ, ಮಾಜಿ ಸಿಎಜಿ ವಿನೋದ್ ರಾಯ್ ಈ ಬಗ್ಗೆ ವಿವರಣೆ ನೀಡಬೇಕೆಂದು ಹೇಳಿದೆ.

Published On :
ಮುಂಬೈ: 2 ಜಿ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಬಿಜೆಪಿಗೆ ದೊರೆತ ತಪರಾಕಿ ಎಂದು ಹೇಳಿರುವ ಶಿವಸೇನೆ, ಮಾಜಿ ಸಿಎಜಿ ವಿನೋದ್ ರಾಯ್ ಈ ಬಗ್ಗೆ ವಿವರಣೆ ನೀಡಬೇಕೆಂದು ಹೇಳಿದೆ.
2 ಜಿ ಹಗರಣವನ್ನು ಸೃಷ್ಟಿಸುವುದರ ಹಿಂದೆ ರಾಯ್ ಅವರಿಗಿದ್ದ ಉದ್ದೇಶವನ್ನು ಪ್ರಶ್ನಿಸಿರುವ ಶಿವಸೇನೆ, ವಿನೋಡ್ ರಾಯ್ ಅವರು ಸತ್ಯದ ಹಾದಿಯಲ್ಲಿ ನಡೆದಿಲ್ಲ, ಈಗ ಹಗರಣಕ್ಕೆ ಸಂಬಂಧಿಸಿದಂತೆ ವಿನೋದ್ ರಾಯ್ ಅವರ ನಡೆಯ ಬಗ್ಗೆಯೇ ಅನುಮಾನಗಳು ವ್ಯಕ್ತವಾಗುತ್ತಿದೆ ಎಂದು ಹೇಳಿದೆ.
ರಾಯ್ ಅವರು ಪಟ್ಟ ಭದ್ರ ಹಿತಾಸಕ್ತಿ ಹೊಂದಿದ್ದ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಕೋರ್ಟ್ ತೀರ್ಪಿನಿಂದ ಈಗ ರಾಯ್ ಅವರು ಸಂಪೂರ್ಣವಾಗಿ ಎಕ್ಸ್ ಪೋಸ್ ಆಗಿದ್ದು, ಅವರು ತಮ್ಮ ಅಧಿಕೃತ ಪದವಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಸಾಬೀತಾಗಿದೆ, 2ಜಿ ಹರಣದ ಬಗ್ಗೆ ವಿನೋದ್ ರಾಯ್ ಈಗ ವಿವರಣೆ ನೀಡಬೇಕಿದೆ ಎಂದು ಎಂದು ಶಿವಸೇನೆ ಆಗ್ರಹಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


