ದೇಶ

ಮಹಾರಾಷ್ಟ್ರ: ಜೈನ ಮಠದಲ್ಲಿ ಆನೆ ದಾಳಿ, ಸ್ವಾಮೀಜಿ ದುರಂತ ಸಾವು

ಮಹಾರಾಷ್ಟ್ರದ ಜಯಸಿಂಗ್'ಪುರದಲ್ಲಿರುವ ನಂದಾನಿ ಮಠಕ್ಕೆ ಸೇರಿದ ಆನೆಯೊಂದು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದು, ಆನೆ ದಾಳಿಗೆ ಸಿಲುಕಿದ ಜಿನಸೇನೆ ಭಟ್ಟಾರಕ ಮಹಾಸ್ವಾಮೀಜಿ (78) ಸಾವನ್ನಪ್ಪಿರುವ...

ಮಹಾರಾಷ್ಟ್ರ: ಜೈನ ಮಠದಲ್ಲಿ ಆನೆ ದಾಳಿ, ಸ್ವಾಮೀಜಿ ದುರಂತ ಸಾವು
ಮಹಾರಾಷ್ಟ್ರ: ಜೈನ ಮಠದಲ್ಲಿ ಆನೆ ದಾಳಿ, ಸ್ವಾಮೀಜಿ ದುರಂತ ಸಾವು
Published On :
ಮುಂಬೈ: ಮಹಾರಾಷ್ಟ್ರದ ಜಯಸಿಂಗ್'ಪುರದಲ್ಲಿರುವ ನಂದಾನಿ ಮಠಕ್ಕೆ ಸೇರಿದ ಆನೆಯೊಂದು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದು, ಆನೆ ದಾಳಿಗೆ ಸಿಲುಕಿದ ಜಿನಸೇನೆ ಭಟ್ಟಾರಕ ಮಹಾಸ್ವಾಮೀಜಿ (78) ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. 
ಭಟ್ಟಾರಕ ಸ್ವಾಮೀಜಿ ಆನೆಗೆ ಮೇವು ನೀಡಲು ಹೋಗಿದ್ದರು. ಈ ವೇಳೆ ಆನೆ ಸೊಂಡಿನಿಂದ ರಭಸದಿಂದ ಹೊಡೆದಿದೆ. ಬಳಿಕ ಸ್ವಾಮೀಜಿ ಕೆಳಗೆ ಬಿದ್ದಿದ್ದಾರೆ. ಬಳಿಕ ಸ್ಥಳದಲ್ಲಿದ್ದ ಕಲ್ಲಿನ ಮೇಲೆ ಸ್ವಾಮೀಜಿಯವರ ತಲೆಗೆ ತೀವ್ರವಾಗಿ ಗಾಯವಾಗಿದೆ. ಕೂಡಲೇ ಸ್ವಾಮೀಜಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 
ಹಸಿ ಮೇವು ತರುವ ಸಲುವಾಗಿ ಮಾವುತ ಹೋಗಿದ್ದ. ಆದರೆ ಸಾಕಷ್ಟು ಸಮಯವಾದರೂ ಮಾವುತ ಬಂದಿರಲಿಲ್ಲ. ಹೀಗಾಗಿ ಸ್ವಾಮೀಜಿಗಳೇ ತಾವೇ ಆನೆಗೆ ಮೇವನ್ನು ನೀಡಲು ಹೋಗಿದ್ದರು. ಈ ವೇಳೆ ಕೋಪಗೊಂಡಿದ್ದ ಆನೆ ಸೊಂಡಿನಿಂದ ಹಿಡಿದು 3-4 ಬಾರಿ ಅಪ್ಪಳಿಸಿತ್ತು. ಬಳಿಕ ಸ್ವಾಮೀಜಿಯವರು ಕಲ್ಲಿನ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.