ಪ್ರಕರಣದಲ್ಲಿ ಎ ರಾಜಾ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿತ್ತು: ರಾಜಾ ಪರ ವಕೀಲರು
ಬಹುಕೋಟಿ 2ಜಿ ತರಂಗಾಂತರ ಪ್ರಕರಣದಲ್ಲಿ ತಮ್ಮ ಕಕ್ಷೀದಾರರಾದ ಎ ರಾಜಾ ಅವರನ್ನು ಬಲಿಪಶುವನ್ನಾಗಿಸಲಾಗಿತ್ತು ಎಂದು ಎ ರಾಜಾ ಪರ ವಕೀಲರು ಹೇಳಿದ್ದಾರೆ.

Published On :
ನವದೆಹಲಿ: ಬಹುಕೋಟಿ 2ಜಿ ತರಂಗಾಂತರ ಪ್ರಕರಣದಲ್ಲಿ ತಮ್ಮ ಕಕ್ಷೀದಾರರಾದ ಎ ರಾಜಾ ಅವರನ್ನು ಬಲಿಪಶುವನ್ನಾಗಿಸಲಾಗಿತ್ತು ಎಂದು ಎ ರಾಜಾ ಪರ ವಕೀಲರು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ದೆಹಲಿಯ ಪಾಟಿಯಾಲ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಒಪಿ ಸೈನಿ ಅವರು, 2 ಪ್ರಕರಣದ ಆರೋಪಿಗಳ ವಿರುದ್ಧದ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಎ ರಾಜಾ, ಕನ್ನಿಮೋಳಿ ಸೇರಿದಂತೆ ಪ್ರಕರಣದ ಎಲ್ಲ 17 ಆರೋಪಿಗಳನ್ನು ಖುಲಾಸೆಗೊಳಿಸುತ್ತಿರುವಾದಿಗಿ ಹೇಳಿತ್ತು. ಈ ಆದೇಶದ ಬೆನ್ನಲ್ಲೇ ಕೋರ್ಟ್ ಹೊರವಲಯದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎ ರಾಜಾ ಪರ ವಕೀಲರು, ಪ್ರಕರಣದಲ್ಲಿ ಎ ರಾಜಾ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಇದೇ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸ್ವಾನ್ ಟೆಲಿಕಾಂ ಪ್ರಮೋಟರ್ಸ್ ಸಂಸ್ಥೆಪರ ವಕೀಲ ವಿಜಯ್ ಅಗರ್ವಾಲ್, ಶಾಹಿದ್ ಉಸ್ಮಾನ್ ಮತ್ತು ವಿನೋದ್ ಗೊಯೆಂಕಾ ಅವರು, ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಹೀಗಾಗಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿCongressಕಾಂಗ್ರೆಸ್New DelhiUPA governmentಯುಪಿಎ ಸರ್ಕಾರ2G case2ಜಿ ಪ್ರಕರಣCBI special courtಸಿಬಿಐ ವಿಶೇಷ ನ್ಯಾಯಾಲಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


