ದೇಶ

ಗುಜರಾತ್ ಚುನಾವಣೆಯಲ್ಲಿ 5.5 ಲಕ್ಷ ಮತದಾರರಿಂದ 'ನೋಟಾ' ಚಲಾವಣೆ

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾರೆ 5.5 ಲಕ್ಷ ಮತದಾರರು ನೋಟಾಗೆ ಮತ ಹಾಕಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ 5.5 ಲಕ್ಷ ಮತದಾರರಿಂದ 'ನೋಟಾ' ಚಲಾವಣೆ
ಮತದಾರರು
Published On :
ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾರೆ 5.5 ಲಕ್ಷ ಮತದಾರರು ನೋಟಾಗೆ ಮತ ಹಾಕಿದ್ದಾರೆ. 
ಗುಜರಾತ್ ನಲ್ಲಿ ಚಲಾವಣೆಯಾಗಿರುವ ನೋಟಾ ಇಲ್ಲಿನ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಎನ್ ಸಿಪಿ ಮತ್ತು ಬಿಎಸ್ ಪಿಯನ್ನೇ ಹಿಂದಿಕ್ಕಿದೆ. ಶೇಖಡಾ 1.8 ನೋಟಾ ಮತಗಳು ಚಲಾವಣೆಯಾಗಿವೆ. ಒಟ್ಟು 5,24,709 ಮತದಾರರು ನೋಟಾ ಗುಂಡಿ ಒತ್ತಿದ್ದಾರೆ. 
ಗುಜರಾತ್ ನಲ್ಲಿ ಜಯ ಗಳಿಸಿರುವ ಬಿಜೆಪಿ ಶೇಕಡಾ 49.0 ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದು 1,39,79,099 ಜನರ ಮತ ಪಡೆದಿದೆ. ಇನ್ನು ಕಾಂಗ್ರೆಸ್ ಶೇ. 41.4 ಮತಗಳನ್ನು ಬಾಚಿಕೊಂಡಿದ್ದು 1,18, 18,690 ಮತಗಳನ್ನು ಗಳಿಸಿಕೊಂಡಿದೆ. 
ಇನ್ನು ಪಕ್ಷೇತರ ಅಭ್ಯರ್ಥಿಗಳು ಶೇಕಡಾ 4.3 ಮತಗಳನ್ನು ಪಡೆದಿದ್ದಾರೆ. ಒಟ್ಟು 12,24,216 ಮತದಾರರು ಪಕ್ಷೇತರರಿಗೆ ಮತದಾನ ಮಾಡಿದ್ದಾರೆ. 
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನೋಟಾ ಐದನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿ ಶೇಕಡಾ 0.9 ಮತದಾರರು ನೋಟಾಗೆ ಮತ ಹಾಕಿದ್ದು ಒಟ್ಟಾರೆ ನೋಟಾ ಸಂಖ್ಯೆ 29,618 ಮತಗಳಾಗಿವೆ. 
ಹಿಮಾಚಲ ಪ್ರದೇಶದಲ್ಲಿ ಭರ್ಜರಿ ಜಯ ಗಳಿಸಿರುವ ಬಿಜೆಪಿ ಶೇಕಡಾ 48.5 ಮತಗಳನ್ನು ಪಡೆದಿದೆ. ಕಾಂಗ್ರೆಸ್ ಶೇಕಡಾ 41.8 ಮತಗಳನ್ನು ಪಡೆದಿದೆ. ಇನ್ನು ಪಕ್ಷೇತರ ಅಭ್ಯರ್ಥಿಗಳು ಶೇ.6.4ರಷ್ಟು ಮತಗಳನ್ನು ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.