ಸುಖೋಯ್ ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಕ್ಷಿಪಣೆ ಜೋಡಣೆ ಕಾರ್ಯ ಪ್ರಾರಂಭ
ಭಾರತೀಯ ವಾಯು ಪಡೆಯ (ಐಎಎಫ್) ಸುಕೋಯ್-40 ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಸೂಪರ್‍ಸಾನಿಕ್ ಕ್ಷಿಪಣಿಯನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ.

Published On :
ನವದೆಹಲಿ: ಭಾರತೀಯ ವಾಯು ಪಡೆಯ (ಐಎಎಫ್) ಸುಕೋಯ್-40 ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಸೂಪರ್‍ಸಾನಿಕ್ ಕ್ಷಿಪಣಿಯನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ.
ಹೀಗೆ ವಿಮಾನಕ್ಕೆ ಕ್ಷಿಪಣಿಯನ್ನು ಜೋಡಿಸಿದ ಕಾರಣ ಅತ್ಯಂತ ವೇಗದ ಸೂಪರ್ ಸಾನಿಕ್ ಕ್ಷಿಪಣಿಯನ್ನು ವಿಮಾನದ ಮೂಲಕವೇ ಉಡಾಯಿಸಿ ವೈರಿಗಳ ನೆಲೆಯನ್ನು ಛಿದ್ರಗೊಳಿಸಬಹುದು. ಭಾರತದಲ್ಲಿ ತೋರಿರುವ ಭದ್ರತಾ ಆತಂಕಕಾರಿ ಸನ್ನಿವೇಶದಲ್ಲಿ ಸೇನಾಪಡೆ ತೆಗೆದುಕೊಂಡ ಈ ನಿರ್ಧಾರ ಅತ್ಯಂತ ಮಹತ್ವವನ್ನು ಪಡೆದಿದೆ.
ನವೆಂಬರ್ ತಿಂಗಳಲ್ಲಿ ಸುಕೋಯ್-30 ಯುದ್ಧ ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಭಾರತೀಯ ವಾಯುಪಡೆ ಯಶಸ್ಸು ಕಂಡಿದ್ದು ಇದೀಗ ಸುಕೋಯ್-40 ಜೆಟ್ ಗಳಿಗೆ ಕ್ಷಿಪಣಿ ಜೋಡಿಸುವ ಕಾರ್ಯ ಇದೀಗ ಪ್ರಾರಂಬಗೊಂಡಿದೆ. 2020ರ ವೇಳೆಗೆ ಈ ಕೆಲಸ ಪೂರ್ಣಗೊಳ್ಳುವುದೆಂದು ಸೇನೆಯ ಅಧಿಕೃತ ಮೂಲಗಳು ಮಾಹಿತಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Air Forceಭಾರತೀಯ ವಾಯು ಸೇನೆSukhoi-30Brahmos supersonic cruise40 Sukhoi combat aircraftಬ್ರಹ್ಮೋಸ್ ಸೂಪರ್‍ಸಾನಿಕ್ ಕ್ಷಿಪಣಿಸುಖೋಯ್ -40 ಯುದ್ಧ ವಿಮಾನಸುಖೋಯ್ -30
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


