ಗೋವಾದಲ್ಲಿ ಈಗ ವೇಶ್ಯಾವಾಟಿಕೆಗೂ ಗೂ ಆಧಾರ್ ಕಡ್ಡಾಯ!
ಮೊಬೈಲ್, ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುತ್ತಿರುವುದು ಗೊತ್ತಿರುವ ವಿಷಯವೇ. ಆದರೆ ಗೋವಾದಲ್ಲಿ ನಡೆಯುತ್ತಿರುವ ಪೇಯ್ಡ್ ಸೆಕ್ಸ್ ಗೂ ಆಧಾರ್ ಕಾರ್ಡ್ ಕಡ್ಡಾಯ ಎಂದರೆ ನೀವು ನಂಬಲೇಬೇಕು.

Published On :
ಪಣಜಿ: ಮೊಬೈಲ್, ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುತ್ತಿರುವುದು ಗೊತ್ತಿರುವ ವಿಷಯವೇ. ಆದರೆ ಗೋವಾದಲ್ಲಿ ನಡೆಯುತ್ತಿರುವ ಪೇಯ್ಡ್ ಸೆಕ್ಸ್ ಗೂ ಆಧಾರ್ ಕಾರ್ಡ್ ಕಡ್ಡಾಯ ಎಂದರೆ ನೀವು ನಂಬಲೇಬೇಕು.
ಗೋವಾದಲ್ಲಿ ಪೇಯ್ಡ್ ಸೆಕ್ಸ್ ಗಾಗಿ ಆಧಾರ್ ಕಾರ್ಡ್ ನ್ನು ಕೇಳುವ ಘಟನೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದ್ದು, ಪಿಂಪ್ ಗಳಿಗೆ ಆಧಾರ್ ಕಾರ್ಡ್ ತೋರಿಸಿದರೆ ಮಾತ್ರ ಪೇಯ್ಡ್ ಸೆಕ್ಸ್ ಗೆ ಅವಕಾಶ ಸಿಗುವುದನ್ನು ಬಹಿರಂಗಪಡಿಸಿದೆ. ಯಾವುದೇ ಯೋಜನೆ ನಕಲಿ ಫಲಾನುಭವಿಗಳಿಗೆ ಅನುಕೂಲವಾಗದಂತೆ ಹೇಗೆ ಆಧಾರ್ ಕಾರ್ಡ್ ನ್ನು ಸರ್ಕಾರಗಳು ಬಳಕೆ ಮಾಡುತ್ತಿದೆಯೋ ಹಾಗೆ ಗೋವಾದಲ್ಲಿ ಪಿಂಪ್ ಗಳು ತಮಗೆ ಹುಡುಗಿಯರಿಗಾಗಿ ಕೇಳುವವರು ಪೊಲೀಸರು ಅಥವಾ ಅವರಿಗೆ ಮಾಹಿತಿ ನೀಡುವವರಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಆಧಾರ್ ಕಾರ್ಡ್ ನ್ನು ಕಡ್ಡಾಯವಾಗಿ ನೀಡುವಂತೆ ಕೇಳುತ್ತಿದ್ದಾರೆ.
ಸ್ನೇಹಿತನ ಬ್ಯಾಚುಲರ್ಸ್ ಪಾರ್ಟಿಗಾಗಿ 5 ಯುವಕರ ತಂಡವೊಂದು ದೆಹಲಿಯಿಂದ ಗೋವಾಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಗೋವಾದ ತೆರಳಿದ್ದ ಯುವಕರ ತಂಡ, 5 ಯುವತಿಯರನ್ನು ಕಳಿಸುವಂತೆ ತಮ್ಮ ಬಳಿ ಇದ ಕಾಂಟಾಕ್ಟ್ ಗೆ ಕೇಳಿದ್ದಾರೆ. ಕೆಲವು ಗಂಟೆಗಳ ನಂತರ ವಾಪಸ್ ಕರೆ ಮಾಡಿದ ವ್ಯಕ್ತಿ ತಮಗೆ ಕರೆ ಮಾಡಿದ್ದವರು ನಿಜವಾಗಿಯೂ ದೆಹಲಿಯಿಂದ ಬಂದವರೋ ಎಂಬುದನ್ನು ತಿಳಿದುಕೊಳ್ಳಲು ಆಧಾರ್ ಕಾರ್ಡ್ ನ್ನು ನೀಡುವಂತೆ ಕೇಳಿದ್ದಾರೆ. ಅಷ್ಟೇ ಅಲ್ಲದೇ ವಾಟ್ಸ್ ಆಪ್ ನಲ್ಲಿ ತಾವು ಉಳಿದುಕೊಂಡಿರುವ ರೂಮ್ ಹಾಗೂ ಹೋಟೆಲ್ ನ ಟ್ಯಾಗ್ ನ್ನು ಕಳಿಸುವಂತೆ ಕೇಳಿದ್ದಾರೆ.
ಪೊಲೀಸರು ಮಾಂಸದಂಧೆ ನಡೆಯುವ ಸ್ಥಳಗಳ ಮೇಲೆ ದಾಳಿ ನಡೆಸುತ್ತಿದ್ದು, ಈ ಅಪಾಯದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪೇಯ್ಡ್ ಸೆಕ್ಸ್ ಗಾಗಿಯೂ ಆಧಾರ್ ಕಾರ್ಡ್ ನ್ನು ಕಡ್ಡಾಯಗೊಳಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


