ಶಿಲ್ಲಾಂಗ್-ನಾಂಗ್‌ಸ್ಟೊಯಿನ್-ರೊಂಗ್ಜೆಂಗ್-ತುರಾ ರಸ್ತೆ ಉದ್ಘಾಟಿಸಿದ ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಲ್ಲಾಂಗ್-ನಾಂಗ್‌ಸ್ಟೊಯಿನ್-ರೊಂಗ್ಜೆಂಗ್-ತುರಾ ರಸ್ತೆಯನ್ನು ಉದ್ಘಾಟಿಸಿದರು...

Published On :
ಶಿಲ್ಲಾಂಗ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಲ್ಲಾಂಗ್-ನಾಂಗ್‌ಸ್ಟೊಯಿನ್-ರೊಂಗ್ಜೆಂಗ್-ತುರಾ ರಸ್ತೆಯನ್ನು ಉದ್ಘಾಟಿಸಿದರು.
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಲುವಾಗಿ ಮಿಜೋರಾಂಗೆ ಪ್ರಯಾಣಿಸಿರುವ ಪ್ರಧಾನಿ ಮೋದಿ ಇದಕ್ಕೂ ಮುನ್ನ ತುಯಿರಿಯಲ್ ಜಲವಿದ್ಯುತ್ ಯೋಜನೆ ಉದ್ಘಾಟಿಸಿದರು.
2018ರಲ್ಲಿ ಮಿಜೋರಾಂ ವಿಧಾನಸಭೆ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಿಗೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದು ಹಲವು ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ.
ಪ್ರಸ್ತುತ ಉದ್ಘಾಟನೆಯಾಗಿರುವ ತುಯಿರಿಯಲ್ ಜಲವಿದ್ಯುತ್ ಯೋಜನೆಗೆ 1998ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಶಂಕುಸ್ಥಾಪನೆ ನೆರವೇರಿಸಿತ್ತು. ಅಂದಿನಿಂದ ಕುಂಟುತ್ತಾ ಸಾಗಿದ್ದ ಈ ಯೋಜನೆ ಇದೀಗ ಪೂರ್ಣಗೊಂಡಿದ್ದು, ಇಂದು ಉದ್ಘಾಟನೆಯಾಗಿದೆ.
ಈ ವೇಳೆ ಮಾತನಾಡಿದ ಮೋದಿ ಸಿಕ್ಕಿಂ ತ್ರಿಪುರಾ ಬಳಿಕ ಮಿಜೋರಾಂ ಈಶಾನ್ಯ ಭಾರತದಲ್ಲಿ ವಿದ್ಯುತ್ ರಫ್ತು ಮಾಡುವ ಮೂರನೇ ರಾಜ್ಯವಾಗಿದೆ. ಅಂತೆಯೇ ಈಶಾನ್ಯ ಭಾರತದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಸಿದ್ಧವಿದ್ದು, ಇದಕ್ಕಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದೆ ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದೆ. ಇಂದು ತುಯಿರಿಯಲ್ ಜಲವಿದ್ಯುತ್ ಯೋಜನೆ ಉದ್ಘಾಟನೆ ಮೂಲಕ ನಾವು ಮಹತ್ವದ ಮೈಲುಗಲ್ಲು ಸ್ಥಾಪನೆ ಮಾಡಿದ್ದು, ಈ ಯೋಜನೆ ಮೂಲಕ ಮಿಜೋರಾಂನಲ್ಲಿ 60 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿMeghalayaಮೇಘಾಲಯShillong-Nongstoin-Rongjeng-Tura Roadಶಿಲ್ಲಾಂಗ್-ನಾಂಗ್‌ಸ್ಟೊಯಿನ್-ರೊಂಗ್ಜೆಂಗ್-ತುರಾ ರಸ್ತೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


