ದೇಶ

ಚಳಿಗಾಲದ ಅಧಿವೇಶನ: 25 ಬಾಕಿ ವಿಧೇಯಕಗಳ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ

ಎರಡು ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ತಡವಾಗಿ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಬಹು ನಿರೀಕ್ಷಿತ ತ್ರಿವಳಿ ತಲಾಖ್ ಸೇರಿದಂತೆ ಒಟ್ಟು 25 ಬಾಕಿ ವಿಧೇಯಕಗಳನ್ನು ಹಾಗೂ 14 ನೂತನ ವಿಧೇಯಕಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಚಳಿಗಾಲದ ಅಧಿವೇಶನ: 25 ಬಾಕಿ ವಿಧೇಯಕಗಳ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ
ಸಂಗ್ರಹ ಚಿತ್ರ
Published On :
ನವದೆಹಲಿ: ಎರಡು ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ತಡವಾಗಿ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಬಹು ನಿರೀಕ್ಷಿತ ತ್ರಿವಳಿ ತಲಾಖ್ ಸೇರಿದಂತೆ ಒಟ್ಟು 25 ಬಾಕಿ ವಿಧೇಯಕಗಳನ್ನು ಹಾಗೂ 14 ನೂತನ  ವಿಧೇಯಕಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. 
ಮುಸ್ಲಿಮ್ ಸಮುದಾಯದ ಮಹಿಳೆಯರ ಬಹು ನಿರೀಕ್ಷಿತ ತ್ರಿವಳಿ ತಲಾಖ್ ಅನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಹೊಸ ಕಾಯಿದೆಗೆ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಇದಕ್ಕೂ ಮೊದಲು  ತ್ರಿವಳಿ ತಲಾಖ್ ಕಾಯ್ಗೆಯನ್ನು ಕೇಂದ್ರ ಸಚಿವ ಸಂಪುಟದ ಮುಂದೆ ತಂದು ಅನುಮೋದನೆ ಪಡೆಯಲಿದೆ. ಬಳಿಕ ಸಂಸತ್ ನ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ. ಇದಲ್ಲದೆ 24 ಬಾಕಿ ಕಾಯ್ದೆಗಳು ಹಾಗೂ 24 ಬಾಕಿ  ವಿಧೇಯಕಗಳು ಹಾಗೂ 14 ನೂತನ ವಿಧೇಯಕಗಳನ್ನು  ಮಂಡಿಸಿ ಸಂಸತ್ ನ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ.
ಅಂತೆಯೇ ಈ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿರುವ  ಮೂರು ಸುಗ್ರೀವಾಜ್ಞೆಗಳನ್ನು ವಿಧೇಯಕಗಳನ್ನಾಗಿ ಮಂಡಿಸಿ ಅನುಮೋದನೆ ಪಡೆಯಲು ಚಿಂತನೆ ನಡೆಸಿದೆ. ಇತ್ತ ಪ್ರತಿಪಕ್ಷಗಳು ತ್ರಿವಳಿ ತಲಾಕ್‌, ಜಿಎಸ್‌ ಟಿ, ಎಲ್ಪಿಜಿ ಸಬ್ಸಿಡಿ  ಕಡಿತ, ರೈತರ ಸಂಕಷ್ಟ, ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ಸೇರಿದಂತೆ ಅನೇಕ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಸಜ್ಜಾಗಿವೆ.
ಮಂಡನೆಯಾಗಲಿರುವ ಪ್ರಮುಖ ವಿಧೇಯಕಗಳು
1.ಮುಸ್ಲಿಂ ಮಹಿಳಾ (ಮದುವೆ ವಿಚಾರದಲ್ಲಿ ಹಕ್ಕುಗಳ ರಕ್ಷಣೆ) ಬಿಲ್‌-2017 (ತ್ರಿವಳಿ ತಲಾಕ್‌ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಲು)
2.ಸಂವಿಧಾನ (123ನೇ ತಿದ್ದುಪಡಿ) ತಿದ್ದುಪಡಿ ಬಿಲ್‌ (ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಉದ್ದೇಶದಿಂದ)
3.ಎನ್ನಾರೈಗಳಿಗೆ ಮತದಾನದ ಹಕ್ಕು ನೀಡುವ ತಿದ್ದುಪಡಿ ವಿಧೇಯಕ
4.ಹಣಕಾಸು ನಿರ್ಣಯ ಮತ್ತು ಠೇವಣಿ ವಿಮಾ ವಿಧೇಯಕ - 2017
5.ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ (ಎರಡನೇ ತಿದ್ದುಪಡಿ) ಬಿಲ್‌-2017

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.