ಶಶಿ ತರೂರ್ ಇಂಗ್ಲೀಷ್ ಪಾಂಡಿತ್ಯವನ್ನು ಟ್ರೋಲ್ ಮಾಡಿದ ಓಮರ್ ಅಬ್ದುಲ್ಲಾ!
ಈಗ ಶಶಿ ತರೂರ್ ಅವರ ಇಂಗ್ಲೀಷ್ ಗೆ ಮಾರುಹೋಗಿರುವ ಜಮ್ಮು-ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಟ್ವಿಟರ್ ನಲ್ಲಿ ಶಶಿ ತರೂರ್ ಅವರನ್ನು ಟ್ರೋಲ್ ಮಾಡಿದ್ದಾರೆ.

Published On :
ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಇಂಗ್ಲೀಷ್ ಭಾಷೆಯ ಮೇಲೆ ಇರುವ ಹಿಡಿತವನ್ನು ಕಂಡವರು ಮೆಚ್ಚಿ ತಲೆದೂಗಿರುವ ಅನೇಕ ಉದಾಹರಣೆಗಳಿವೆ, ಈಗ ಶಶಿ ತರೂರ್ ಅವರ ಇಂಗ್ಲೀಷ್ ಗೆ ಮಾರುಹೋಗಿರುವ ಜಮ್ಮು-ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಟ್ವಿಟರ್ ನಲ್ಲಿ ಶಶಿ ತರೂರ್ ಅವರನ್ನು ಟ್ರೋಲ್ ಮಾಡಿದ್ದಾರೆ.
ಸಾಮಾನ್ಯವಾಗಿ ಶಶಿ ತರೂರ್ ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡಿದರೆ ಅದರ ಅರ್ಥವನ್ನು ಎಲ್ಲರೂ ಹುಡುಕುತ್ತಿರುತ್ತಾರೆ. ಪ್ರತಿ ಬಾರಿಯೂ ಅವರ ಟ್ವೀಟ್ ನಲ್ಲಿ ಒಂದು ಹೊಸ ಪದವನ್ನು ತಿಳಿಯಲು ಸಾಧ್ಯವಾಗುತ್ತದೆ. ಈ ಬಾರಿ ಶಶಿ ತರೂರ್ ಅವರ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓಮರ್ ಅಬ್ದುಲ್ಲ, ಇಂಗ್ಲೀಶ್ ಕಲಿಯಬೇಕಾದರೆ ನನ್ನ ಸ್ನೇಹಿತ ಶಶಿ ತರೂರ್ ಅವರನ್ನು ಫಾಲೋ ಮಾಡಿ, ಗೊತ್ತಿಲ್ಲದೇ ಇರುವ ಅನೇಕ ಪದಗಳನ್ನು ನೋಡುತ್ತೀರಿ, ವಾಕ್ಯಗಳಲ್ಲಿ ಬಳಕೆ ಮಾಡಲು ಒದ್ದಾಡುತ್ತೀರಿ ಎಂದು ಓಮರ್ ಅಬ್ದುಲ್ಲಾ ಶಶಿ ತರೂರ್ ಅವರನ್ನು ಟ್ರೋಲ್ ಮಾಡಿ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


