ದೇಶ

ವಿಧವೆ ಅತ್ತಿಗೆ ಜತೆ ಬಲವಂತದ ಮದುವೆ: ಅಪ್ರಾಪ್ತ ಬಾಲಕ ಆತ್ಮಹತ್ಯೆಗೆ ಶರಣು!

ವಿಧವೆ ಅತ್ತಿಗೆ ಜತೆ ಬಲವಂತವಾಗಿ ಮದುವೆ ಮಾಡಿದ್ದಕ್ಕೆ ಮನನೊಂದು 15 ವರ್ಷದ ಅಪ್ರಾಪ್ತ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ...

ವಿಧವೆ ಅತ್ತಿಗೆ ಜತೆ ಬಲವಂತದ ಮದುವೆ: ಅಪ್ರಾಪ್ತ ಬಾಲಕ ಆತ್ಮಹತ್ಯೆಗೆ ಶರಣು!
ಸಂಗ್ರಹ ಚಿತ್ರ
Published On :
ಗಯಾ: ವಿಧವೆ ಅತ್ತಿಗೆ ಜತೆ ಬಲವಂತವಾಗಿ ಮದುವೆ ಮಾಡಿದ್ದಕ್ಕೆ ಮನನೊಂದು 15 ವರ್ಷದ ಅಪ್ರಾಪ್ತ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 
ಬಿಹಾರದ ಗಯಾ ಜಿಲ್ಲೆಯ ರಾಮನ್ ವಿನೋಬಾನಗರ್ ಗ್ರಾಮದಲ್ಲಿ ಬಾಲಕ ಮಹಾದೇವ್ ಗೆ ಮೃತ ಅಣ್ಣನ ಹೆಂಡತಿ ಜತೆ ಬಲವಂತವಾಗಿ ಮದುವೆ ಮಾಡಲಾಗಿತ್ತು. ಇದರಿಂದ ನೊಂದ ಆತ ಕೆಲ ಗಂಟೆಗಳಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 
ಮಹಾದೇವ್ ಅಣ್ಣ ಸತೀಶ್ ದಾಸ್ ಗೆ 2009ರಲ್ಲಿ ರೂಬಿದೇವಿ ಎಂಬಾಕೆಯೊಂದಿಗೆ ಮದುವೆಯಾಗಿತ್ತು. ಎಲೆಕ್ಟ್ರಿಷಿಯನ್ ಕೆಲಸದಲ್ಲಿದ್ದ ಸತೀಶ್ ದಾಸ್ 2013ರಲ್ಲಿ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದರು. ಸತೀಶ್ ಸಾವಿನ ಬಳಿಕ ಆತನ ಕುಟುಂಬಕ್ಕೆ 80 ಸಾವಿರ ರುಪಾಯಿ ಪರಿಹಾರ ಧನ ಸಿಕ್ಕಿತ್ತು. ಈ ಹಣ ಸತೀಶ್ ಹೆಂಡತಿಗೆ ಸೇರಬೇಕು ಎಂದು ರೂಬಿದೇವಿ ಪೋಷಕರು ಪಟ್ಟುಹಿಡಿದರು. ಈ ಹಣದ ಆಸೆಗಾಗಿ ಸತೀಶ್ ತಂದೆ ಚಂದ್ರಶೇಖರ್ ದಾಸ್ ತಮ್ಮ ಎರಡನೇ ಮಗನಿಗೆ ಸೊಸೆಯನ್ನು ಕೊಟ್ಟು ಮದುವೆ ಮಾಡಿ ಈಗ ಎರಡನೇ ಮಗನ ನ್ನು ಕಳೆದುಕೊಂಡಿದ್ದಾರೆ. 
ಮಹಾದೇವ್ ಆತ್ಮಹತ್ಯೆ ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಾದೇವ್ ತಂದೆ ಚಂದ್ರಶೇಖರ್, ತಾಯಿ, ರೂಬಿದೇವಿ ಸೇರಿದಂತೆ ಮೂವರನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.