ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೂ ಟೀವಿಯಲ್ಲಿ ಕಾಂಡೋಮ್ ಜಾಹಿರಾತು ಪ್ರಸಾರವಿಲ್ಲ: ಕೇಂದ್ರ ಸರ್ಕಾರ
ಇನ್ನು ಮುಂದೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಟಿವಿಗಳಲ್ಲಿ ಕಾಂಡೋಮ್ ಕುರಿತ ಜಾಹಿರಾತು ಪ್ರದರ್ಶನ ಮಾಡಬಾರದು ಎಂದು ಕೇಂದ್ರ ಸರ್ಕಾರ ವಾಹಿನಿಗಳಿಗೆ ನಿರ್ದೇಶನ ನೀಡಿದೆ.

Published On :
ನವದೆಹಲಿ: ಇನ್ನು ಮುಂದೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೂ ಟಿವಿಗಳಲ್ಲಿ ಕಾಂಡೋಮ್ ಕುರಿತ ಜಾಹಿರಾತು ಪ್ರದರ್ಶನ ಮಾಡಬಾರದು ಎಂದು ಕೇಂದ್ರ ಸರ್ಕಾರ ವಾಹಿನಿಗಳಿಗೆ ನಿರ್ದೇಶನ ನೀಡಿದೆ.
ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಆದೇಶ ಹೊರಡಿಸಿದ್ದು, ರಾತ್ರಿ 10 ಗಂಟೆ ಮೇಲಷ್ಟೇ ಕಾಂಡೋಮ್ ಜಾಹಿರಾತುಗಳನ್ನು ಪ್ರಸಾರ ಮಾಡಬೇಕು ಎಂದು ಆದೇಶಿಸಿದೆ. ಇತ್ತೀಚೆಗೆ ಹಗಲು ಹೊತ್ತಿನಲ್ಲಿ ಪ್ರಸಾರವಾಗುತ್ತಿರುವ ಕಾಂಡೋಮ್ ಜಾಹಿರಾತುಗಳು ಅಸಭ್ಯವಾಗಿದ್ದು, ಮಕ್ಕಳು ಮತ್ತು ಕುಟುಂಬಸ್ಥರ ಜೊತೆ ವೀಕ್ಷಿಸಲು ಮುಜುಗರವಾಗುತ್ತಿದೆ ಎಂಬ ಸತತ ಮನವಿಗಳು ಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಇನ್ನು ಇತ್ತೀಚೆಗಷ್ಟೇ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮದ ನಡುವೆ ಪ್ರಸಾರವಾಗುತ್ತಿದ್ದ ಕಾಂಡೋಮ್ ಜಾಹಿರಾತನ್ನು ಕೂಡಲೇ ತೆಗೆದು ಹಾಕುವಂತೆ ವಾಹಿನಿಗೆ ತಿಳಿಸಿದ್ದರು. ಆ ಜಾಹಿರಾತಿನಲ್ಲಿ ನಟಿ ಬಿಪಾಶ ಬಸು ಹಾಗೂ ಅಕೆಯ ಪತಿ ಕರಣ್ ಸಿಂಗ್ ಗ್ರೋವರ್ ನೊಂದಿಗೆ ತೀರಾ ಕೆಟ್ಟದಾಗಿ ಜಾಹಿರಾತು ನೀಡಿದ್ದಾರೆ ಎಂಬ ಕಾರಣಕ್ಕೆ ಸಲ್ಮಾನ್ ಈ ಜಾಹಿರಾತು ವಿರೋಧಿಸಿದ್ದರು.
ಇದೀಗ ಸ್ವತಃ ಕೇಂದ್ರ ಸರ್ಕಾರವೇ ಕಾಂಡೋಮ್ ಜಾಹಿರಾತುಗಳ ಪ್ರಸಾರದ ಅವಧಿ ಮೇಲೆ ನಿಯಂತ್ರಣ ಹೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiInformation and Broadcasting Ministryಕೇಂದ್ರ ಸರ್ಕಾರUnion Govt.ಕಾಂಡೋಮ್ ಜಾಹಿರಾತುಮಾಹಿತಿ ಮತ್ತು ಪ್ರಸಾರ ಸಚಿವಾಲಯCondom Ads
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


