ವಕೀಲರ ದುಬಾರಿ ಶುಲ್ಕಕ್ಕೆ ನಿಯಂತ್ರಣ ಹಾಕಿ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸಲಹೆ
ಕಾನೂನು ಸಲಹೆ ಪಡೆಯುವುದು ಇಂದು ಅತ್ಯಂತ ದುಬಾರಿ ವ್ಯವಹಾರವಾಗಿದೆ ಎಂದ ಸುಪ್ರೀಂ ಕೋರ್ಟ್ ಈ ಸಂಬಂಧ ತನ್ನ ಆತಂಕ ಹೊರಹಾಕಿದೆ.

Published On :
ನವದೆಹಲಿ: ಕಾನೂನು ಸಲಹೆ ಪಡೆಯುವುದು ಇಂದು ಅತ್ಯಂತ ದುಬಾರಿ ವ್ಯವಹಾರವಾಗಿದೆ ಎಂದ ಸುಪ್ರೀಂ ಕೋರ್ಟ್ ಈ ಸಂಬಂಧ ತನ್ನ ಆತಂಕ ಹೊರಹಾಕಿದೆ.
ವಕೀಲರು ತಮ್ಮ ಕಕ್ಷಿದಾರರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ಬಡವರಿಗೆ ನ್ಯಾಯ ದೊರಕದ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ವಕೀಲರ ಶುಲ್ಕವನ್ನು ನಿಯಂತ್ರಣ ಮಾಡುವ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಸಲಹೆ ಮಾಡಿದೆ.
ವಕೀಲರ ಶುಲ್ಕಕ್ಕೆ ಕನಿಷ್ಠ ಹಾಗೂ ಗರಿಷ್ಠ ಮಿತಿಗಳನ್ನು ನಿಗದಿ ಪಡಿಸಬೇಕೆಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ಆದರ್ಶ್ ಕೆ. ಗೋಯಲ್ ಮತ್ತು ಯು.ಯು. ಲಲಿತ್ ಅವರನ್ನೊಳಗೊಂಡ ಪೀಠ ಈ ಸಲಹೆ ನೀಡಿದ್ದು ಕಾನೂನು ವೃತ್ತಿಯಲ್ಲಿರುವವರಿಗಾಗಿ ನೀತಿ ಸಂಹಿತೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದಿದೆ. ಕಾನೂನು ಆಯೋಗದ ವರದಿ, ಸುಪ್ರೀಂ ಕೋರ್ಟ್ ನ ಹಳೆಯ ತೀರ್ಪುಗಳನ್ನು ಈ ವೇಳೆ ಪೀಠವು ಉಲ್ಲೇಖಿಸಿದೆ.
ಆರ್ಥಿಕವಾಗಿ ಸದೃಢರಲ್ಲದವರು ಸಮರ್ಥ ವಕೀಲರ ಸಲಹೆ ಪಡೆಯುವುದು ಕಠಿಣವಾಗುತ್ತಿದೆ. ತೀರ್ಪಿನ ಫಲಾನುಭವಿಗಳ ಲಾಭದಲ್ಲಿ ಪಾಲು ಪಡೆಯುವ ವಕೀಲರ ಪ್ರವೃತ್ತಿ ಖಂಡನೀಯ ಎಂದಿರುವ ನ್ಯಾಯಾಲಯ ವಕೀಲರು ವೃತ್ತಿ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದಿದೆ. ಇದೇ ವೇಳೆ ಹೆಚ್ಚಿನ ಶುಲ್ಕ ಪಡೆದು ಅನ್ಯಾಯವೆಸಗುವ ವಕೀಲರ ವಿರುದ್ಧ ಕ್ರಮ ಜರುಗಿಸಬೇಕೆಂದು ನ್ಯಾಯಾಲಯ ಸಲಹೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtಸುಪ್ರೀಂ ಕೋರ್ಟ್ವಕೀಲರ ಶುಲ್ಕLawyers feeJustices A K Goelpercentage of claimನ್ಯಾಯಮೂರ್ತಿ ಎಕೆ ಗೋಲ್ಲಾಭದಲ್ಲಿನ ಪಾಲು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


