ದೇಶ

ಚೆನ್ನೈ ಆರ್ ಕೆ ನಗರ ಉಪ ಚುನಾವಣೆ: ನಟ ವಿಶಾಲ್, ದೀಪಾ ಜಯಕುಮಾರ್ ನಾಮಪತ್ರ ತಿರಸ್ಕೃತ

ಆರ್ ಕೆ ನಗರ ಉಪ ಚುನಾವಣೆಗೆ ಖ್ಯಾತ ತಮಿಳು ನಟ ವಿಶಾಲ್ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ....

ಚೆನ್ನೈ ಆರ್ ಕೆ ನಗರ ಉಪ ಚುನಾವಣೆ: ನಟ ವಿಶಾಲ್, ದೀಪಾ ಜಯಕುಮಾರ್ ನಾಮಪತ್ರ ತಿರಸ್ಕೃತ
ವಿಶಾಲ್, ದೀಪಾ ಜಯಕುಮಾರ್
Published On :
ಚೆನ್ನೈ: ಆರ್ ಕೆ ನಗರ ಉಪ ಚುನಾವಣೆಗೆ ಖ್ಯಾತ ತಮಿಳು ನಟ ವಿಶಾಲ್ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸಂಬಂಧಿ ದೀಪಾ ಜಯಕುಮಾರ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ಮಂಗಳವಾರ ತಿರಸ್ಕರಿಸಿದೆ.
ನಟ ಹಾಗೂ ನಾಡಿಗರ್ ಸಂಗಮ್ ಪ್ರಧಾನ ಕಾರ್ಯದರ್ಶಿಯಾಗಿರುವ ವಿಶಾಲ್ ಅವರು ಕಳೆದ ಶನಿವಾರ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದರು. ಅಲ್ಲದೆ ಸೋಮವಾರ ಆರ್ ಕೆ ನಗರ ಉಪ ಚುನಾವಣೆಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. 
ಇನ್ನು ದೀಪಾ ಜಯಕುಮಾರ್ ಸಹ ನಿನ್ನೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ನಾಮಪತ್ರ ಅರ್ಜಿಯಲ್ಲಿ ಕೆಲವು ಭಿನ್ನತೆಗಳಿವೆ ಎಂಬ ಕಾರಣಕ್ಕೆ ವಿಶಾಲ್ ಹಾಗೂ ದೀಪಾ ಅವರ ನಾಮಪಪತ್ರವನ್ನು ಚುನಾವಣಾ ಅಧಿಕಾರಿಗಳು ತಿರಸ್ಕರಿಸಿದ್ದಾರೆ.
ಜಯಲಲಿತಾ ಅವರ ನಿಧನದಿಂದ ತೆರವಾದ ಆರ್ ಕೆ ನಗರಕ್ಕೆ ಈಗ ಎರಡನೇ ಬಾರಿ ಉಪ ಚುನಾವಣೆ ನಿಗದಿಯಾಗಿದೆ. ಈ ಹಿಂದೆ ಮತದಾರರಿಗೆ ಭಾರಿ ಪ್ರಮಾಣದಲ್ಲಿ ಹಣ ಹಂಚಲಾಗಿದೆ ಎಂಬ ಕಾರಣಕ್ಕೆ ಚುನಾವಣಾ ಆಯೋಗ ಉಪ ಚುನಾವಣೆಯನ್ನೇ ರದ್ದುಗೊಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.