ದೇಶ

ಮತಗಳಿಗಾಗಿ ರಾಹುಲ್ ಗಾಂಧಿ ಈಗ ಹಿಂದೂ ಆಗಿದ್ದಾರೆ: ಸ್ಮೃತಿ ಇರಾನಿ

ಬಹುಸಂಖ್ಯಾತ ಹಿಂದೂಗಳ ಮತ ಸೆಳೆಯುವ ಉದ್ದೇಶದಿಂದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗುಜರಾತ್ ನ ದೇವಾಲಯಗಳಿಗೆ ಭೇಟಿ...

ಮತಗಳಿಗಾಗಿ ರಾಹುಲ್ ಗಾಂಧಿ ಈಗ ಹಿಂದೂ ಆಗಿದ್ದಾರೆ: ಸ್ಮೃತಿ ಇರಾನಿ
ಸ್ಮೃತಿ ಇರಾನಿ
Published On :
ಅಮಹದಾಬಾದ್: ಬಹುಸಂಖ್ಯಾತ ಹಿಂದೂಗಳ ಮತ ಸೆಳೆಯುವ ಉದ್ದೇಶದಿಂದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗುಜರಾತ್ ನ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯವಾಡಿದ್ದಾರೆ. 
ಗುಜರಾತ್ ನ ಮಣಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುರೇಶ್ ಪಟೇಲ್ ಅವರ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದ ಇರಾನಿ ಅವರು, ನರೇಂದ್ರ ಮೋದಿ ಅವರು ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ಪ್ರಧಾನಮಂತ್ರಿಯಾದ ಬಳಿಕ ಈ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. 
ದೇವಾಲಯಗಳಲ್ಲಿ ತಲೆ ಬಾಗಿಸುತ್ತಿರುವ ರಾಹುಲ್ ಬಾಬಾ ದೇವತೆಗಳಿಗೆ ಭಕ್ತಿ ತೋರುವ ನಾಟಕವಾಡುತ್ತಿದ್ದು ಹಿಂದೂ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿ ನೀವು ಜನಸಾಮಾನ್ಯರನ್ನೇ ಬಿಟ್ಟಿಲ್ಲ. ದೇವರನ್ನಾದರೂ ಬಿಡಿ. ದೇವರ ಪವಾಡ ನೋಡಿ. ಸೋಮನಾಥ ದಾದಾರ ಬಳಿ ಪ್ರಾರ್ಥನೆ ಮಾಡಲು ಗಾಂಧಿ ಹೋಗಿದ್ದರು. ಕೊನೆಗೆ ಸತ್ಯ ಆಚೆ ಬಂತು ನೋಡಿ ಎಂದು ಸ್ಮೃತಿ ಇರಾನೆ ಕುಟುಕಿದ್ದಾರೆ. 
ಗುಜರಾತ್ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನು ಅರಿತ ಕಾಂಗ್ರೇಸ್ಸಿಗರು ಇದೀಗ ಹಿಂದೂ ಎಂದು ಅರಚುತ್ತಿದ್ದಾರೆ. ತನ್ನ ಕೆಲಸಗಾರರು ಗೋ ಹತ್ಯೆ ಮಾಡುತ್ತಿರುವುದನ್ನು ಕಣ್ಣಾರೆ ಕಂಡು ಕಾಣದಂತಿದ್ದ ವ್ಯಕ್ತಿ ಈಗ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾನೆ ಎಂದ ಕಿಚಾಯಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.