ಸೈನ್ಯದ ಮುಂದೆ ವಿವಿಧ ಆಯ್ಕೆಗಳಿವೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್
"2016 ರ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಅಂತಹಾ ಇನ್ನೂ ಅನೇಕ ಕಾರ್ಯಾಚರಣೆ ಕೈಗೊಳ್ಳಲು ಭಾರತೀಯ ಸೈನ್ಯವು ಹಲವಾರು ಆಯ್ಕೆಗಳನ್ನು ಹೊಂದಿದೆ"

Published On :
ನವದೆಹಲಿ: "2016 ರ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಅಂತಹಾ ಇನ್ನೂ ಅನೇಕ ಕಾರ್ಯಾಚರಣೆ ಕೈಗೊಳ್ಳಲು ಭಾರತೀಯ ಸೈನ್ಯವು ಹಲವಾರು ಆಯ್ಕೆಗಳನ್ನು ಹೊಂದಿದೆ" ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇಂದು ಹೇಳಿದರು. ಅವರು ಪತ್ರಕರ್ತ ಮತ್ತು ಭದ್ರತಾ ವಿಶ್ಲೇಷಕ ನಿತಿನ್ ಗೋಖಲೆ ಬರೆದಿರುವ "ಸೆಕ್ಯೂರಿಂಗ್ ಇಂಡಿಯಾ ದಿ ಮೋದಿ ವೇ" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
2015 ರ ಮ್ಯಾನ್ಮಾರ್ ಕಾರ್ಯಾಚರಣೆ ಮತ್ತು 2016 ರಲ್ಲಿ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಲ್ಲಿನ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಅಂತಹ ಮತ್ತಷ್ಟು ಕಾರ್ಯಾಚರಣೆಗಳನ್ನು ಸೈನ್ಯವು ಕೈಗೆತ್ತಿಕೊಳ್ಳುವ ಸಾಮರ್ಥ್ಯ ಹೊಂದಿದೆಯೆ ಎಂದು ಗೋಖಲೆ ರಾವತ್ ಅವರನ್ನು ಪ್ರಶ್ನಿಸಿದಾಗ ರಾವತ್ ಉತ್ತರಿಸಿದರು.
"ಗಡಿರೇಖೆಯಲ್ಲಿ ಕಾರ್ಯಾಚರಣೆಯನ್ನು ನಡೆಸುವ ಹಲವಾರು ವಿಧಾನಗಳಿವೆ. ಅದೇ ರೀತಿಯ ಕಾರ್ಯಾಚರಣೆಯನ್ನು ನಾವು ಪುನರಾವರ್ತಿಸುವುದಿಲ್ಲ ಏಕೆಂದರೆ ಯಾವುದೇ ಅದು ಪುನರಾವರ್ತನೆಯಾಗಬಾರದು. ನಾವು ಅಚ್ಚರಿಯನ್ನು ನೀಡಬೇಕಾದಲ್ಲಿ, ಹೊಸದನ್ನು ನಾವು ಯೋಜಿಸಬೇಕಾಗಿದೆ" ಸೇನಾ ಮುಖ್ಯಸ್ಥರು ಹೇಳಿದ್ದಾರೆ
ಉಗ್ರರು 18 ಭಾರತೀಯ ಸೈನಿಕರನ್ನು ಕೊಂದ ನಂತರ ಗಡಿಯುದ್ದಕ್ಕೂ ಸ್ಪಷ್ಟ ಸಂದೇಶವನ್ನು ಸಾರಲು ಮಯನ್ಮಾರ್ ಕಾರ್ಯಾಚರಣೆ ಅಗತ್ಯವಾಗಿತ್ತು. ರಾವತ್ ನುಡಿದರು.
ನಿಯೋಜಿತ ಜೂನಿಯರ್ ಅಧಿಕಾರಿಗಳ ಕೇಡರ್ ಗಳ ಬಗೆಗೆ ಹೇಳಿದ ರಾವತ್ ಈಗ ಅವರಿಗೆ ಸೇನೆಯನ್ನು ಸೇರಲು ಅನುಮೋದಿಸಲಾಗಿದೆ ಮತ್ತು ಜನವರಿ 1, 2018 ಅವರು ಸೇನೆಯ ಭಾಗವಾಗಲಿದ್ದಾರೆ ಎಂದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Myanmar OperationSurgical strikesಸರ್ಜಿಕಲ್ ಸ್ಟ್ರೈಕ್General Bipin Rawatಜನರಲ್ ಬಿಪಿನ್ ರಾವತ್Nitin GokhaleSecuring India the Modi Wayನಿತಿನ್ ಗೋಖಲೆಸೆಕ್ಯೂರಿಂಗ್ ಇಂಡಿಯಾ ದಿ ಮೋದ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


