ನಾರಾಯಣಾ ಮೂರ್ತಿ ವಿರುದ್ಧ ಇನ್ಫೋಸಿಸ್ ನ ಮಾಜಿ ಅಧ್ಯಕ್ಷ ಶೇಷಸಾಯಿ ಅಸಮಾಧಾನ
ತಮ್ಮ ಬಗ್ಗೆ ಇನ್ಫೋಸಿಸ್ ನ ಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಮಾಡಿರುವ ಆರೋಪಗಳು ಸುಳ್ಳು ಎಂದು ಇನ್ಫೋಸಿಸ್ ನ ಮಾಜಿ ಅಧ್ಯಕ್ಷ ಅರ್ ಶೇಷ ಸಾಯಿ ಹೇಳಿದ್ದಾರೆ.

Published On :
ಬೆಂಗಳೂರು: ತಮ್ಮ ಬಗ್ಗೆ ಇನ್ಫೋಸಿಸ್ ನ ಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಮಾಡಿರುವ ಆರೋಪಗಳು ಸುಳ್ಳು ಎಂದು ಇನ್ಫೋಸಿಸ್ ನ ಮಾಜಿ ಅಧ್ಯಕ್ಷ ಅರ್ ಶೇಷ ಸಾಯಿ ಹೇಳಿದ್ದಾರೆ.
ಷೇರುದಾರರಿಗೆ ತಾವು ತಪ್ಪು ಮಾಹಿತಿ ನೀಡಿರುವಂತೆ ಬಿಂಬಿಸುವ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಶೇಷ ಸಾಯಿ ಹೇಳಿದ್ದಾರೆ. ಇನ್ಫೋಸಿಸ್ ಮಂಡಳಿಗೆ ರಾಜೀನಾಮೆ ನೀಡಿದ ಬಳಿಕ, ಪ್ರಚೋದನೆಗಳ ಹೊರತಾಗಿಯೂ ನಾನು ಸಾರ್ವಜನಿಕ ಹೇಳಿಕೆ ನೀಡುವುದರಿಂದ ದೂರ ಉಳಿದಿದ್ದೆ. ಆದರೆ ನಾರಾಯಣ ಮೂರ್ತಿ ಅವರು ಹೂಡಿಕೆದಾರರಿಗೆ ಹೇಳಿಕೆ ನೀಡಿರುವುದು ನನ್ನನ್ನು ಸಾರ್ವಜನಿಕ ಹೇಳಿಕೆ ನೀಡುವಂತೆ ಮಾಡಿದೆ ಎಂದು ಶೇಷ ಸಾಯಿ ಹೇಳಿದ್ದಾರೆ.
ಸಿಇಒ ಸಿಕ್ಕಾ ರಾಜೀನಾಮೆ ಬಳಿಕ ಶೇಷಸಾಯಿ ಅವರು ಆ.24 ರಂದು ಇನ್ಫೋಸಿಸ್ ನಾನ್ ಎಕ್ಸಿಕ್ಯುಟಿವ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬಳಿಕ ನಂದನ್ ನಿಲೇಕಣಿ ನಾನ್ ಎಕ್ಸಿಕ್ಯುಟಿವ್ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Infosysಇನ್ಫೋಸಿಸ್N.R. Narayana MurthyR. Seshasayeeshareholdersಎನ್ಆರ್ ನಾರಾಯಣ ಮೂರ್ತಿಆರ್ ಶೇಷ ಸಾಯಿಷೇರುದಾರರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


