ಭಾರತೀಯ ಸೇನೆಯಲ್ಲಿ ಮಹತ್ವದ ಸುಧಾರಣೆ ತರಲು ಕೇಂದ್ರ ಸಜ್ಜು
ಭಾರತ ದೇಶದ ಹೆಮ್ಮೆಯ ಕವಚ ಭಾರತೀಯ ಸೇನೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ...
Published On :
ಭಾರತ ದೇಶದ ಹೆಮ್ಮೆಯ ಕವಚ ಭಾರತೀಯ ಸೇನೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಸ್ವತಂತ್ರ್ಯ ನಂತರ ಭಾರತೀಯ ಸೇನೆಯಲ್ಲಿ ಆಗುವತ್ತಿರುವ ಮಹತ್ವದ ಬದಲಾವಣೆ ಇದಾಗಿರಲಿದೆ. ಅಂತಹ ದೊಡ್ಡ ಮತ್ತು "ದೂರಗಾಮಿ" ಸುಧಾರಣಾ ಪ್ರಕ್ರಿಯೆಯನ್ನು ಸೈನ್ಯದಲ್ಲಿ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಡೋಕ್ಲಾಂ ವಿವಾದದ ನಂತರ ಈ ಸುಧಾರಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ಕೇವಲ ಡೋಕ್ಲಾಂ ನಂತಹ ಘಟನೆಗಳಿಗೆ ಇದು ನಿರ್ಧಿಷ್ಟವಾಗಿಲ್ಲ. ಈ ಪ್ರಕ್ರಿಯೆ ಡೋಕ್ಲಾಂಗೂ ಮುಂಚೆಯೇ ಕ್ರಮಕೈಗೊಳ್ಳಲಾಗಿತ್ತು ಎಂದರು.
ಲೆಫ್ಟಿನೆಂಟ್ ಜನರಲ್ ಡಿಬಿ ಶೇಖ್ತಕರ್ ನೇತೃತ್ವದ ಸಮಿತಿಯು ಭಾರತೀಯ ಸೇನೆಯಲ್ಲಿ ಯುದ್ಧದ ಸಾಮರ್ಥ್ಯ ಹೆಚ್ಚಿಸಲು ಮತ್ತು ಸಶಸ್ತ್ರ ಪಡೆಗಳ ರಕ್ಷಣಾ ವೆಚ್ಚವನ್ನು ಮರುಸಮತೋಲನಗೊಳಿಸುವ ಕ್ರಮಗಳನ್ನು ಶಿಫಾರಸು ಮಾಡಿತ್ತು. ಈ ಶಿಫಾರಸ್ಸಿನ ಹಿನ್ನೆಲೆಯಲ್ಲಿ ನಾವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಿದ್ದೇವೆ ಎಂದರು.
ಭಾರತೀಯ ಸೇನೆಯಲ್ಲಿನ ರಚನಾತ್ಮಕ ಬದಲಾವಣೆಗಳಿಗೆ 99 ಶಿಫಾರಸುಗಳನ್ನು ಸಮಿತಿಯು ಸೂಚಿಸಿತ್ತು. ಅದರಂತೆ ರಕ್ಷಣಾ ಸಚಿವಾಲಯವು ಎಲ್ಲಾ ಪಾಲುದಾರರೊಂದಿಗಿನ ಸಮಾಲೋಚನೆ ನಡೆಸಿ ಒಟ್ಟಾರೆ 65 ಶಿಫಾರಸುಗಳನ್ನು ಕಾರ್ಯ ರೂಪಕ್ಕೆ ತರಲು ನಿರ್ಧರಿಸಿದ್ದೇವೆ. ಇನ್ನು 2019ರ ಡಿಸೆಂಬರ್ 31ರೊಳಗೆ ಈ ಸುಧಾರಣೆಗಳನ್ನು ಜಾರಿಗೊಳಿಸಲಾಗುವುದು ಎಂದರು.
ಜೂನಿಯರ್ ನಿಯೋಜಿತ ಅಧಿಕಾರಿಗಳು ಮತ್ತು ಇತರ ಶ್ರೇಣಿ ಮತ್ತು ನಾಗರಿಕರು ಫೋಸ್ಟ್ ಗಳು ಸೇರಿದಂತೆ ಮೊದಲಿಗೆ ಸರಿ ಸುಮಾರು 57,000 ಅಧಿಕಾರಿಗಳ ಹುದ್ದೆಗಳನ್ನು ಪುನರ್ವಸತಿ ಮತ್ತು ಪುನರ್ ರಚನೆ ಮಾಡಲಾಗುವುದು. ಇನ್ನು ವಾಹನದ ಡಿಪೋ, ಒಸಶಸ್ತ್ರ ಪಡೆ ಡಿಪೋ ಮತ್ತು ಕೇಂದ್ರ ಒಸಶಸ್ತ್ರ ಪಡೆ ಡಿಪೋಗಳು ಒಳಗೊಂಡಂತೆ ಸುವ್ಯವಸ್ಥಿತ ದಾಸ್ತಾನು ನಿಯಂತ್ರಣ ಕಾರ್ಯವಿಧಾನಗಳ ಮರುನಿಯೋಜನೆ ಮಾಡಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arun Jaitleyರಕ್ಷಣಾ ಸಚಿವಅರುಣ್ ಜೇಟ್ಲಿIndian ArmyDefence Ministerಭಾರತೀಯ ಸೇನೆmajor reformsಮಹತ್ವದ ಸುಧಾರಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

