ನನ್ನ ಬಳಿ 'ಸ್ಲೀಪರ್ ಸೆಲ್' ಇವೆ, ರಾಜಿನಾಮೆ ನೀಡಿ: ತಮಿಳುನಾಡು ಸಿಎಂ ಪಳನಿಸ್ವಾಮಿಗೆ ದಿನಕರನ್ ಎಚ್ಚರಿಕೆ
ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರಿಗೆ ಈಗ ಹೊಸ ಸಂಕಷ್ಟ ಎದುರಾಗಿದ್ದು, ತಮ್ಮ ನಾಯಕತ್ವದ ವಿರುದ್ಧವೇ...

Published On :
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರಿಗೆ ಈಗ ಹೊಸ ಸಂಕಷ್ಟ ಎದುರಾಗಿದ್ದು, ತಮ್ಮ ನಾಯಕತ್ವದ ವಿರುದ್ಧವೇ ತಿರುಗಿಬಿದ್ದಿರುವ ಜೈಲು ಪಾಲಾಗಿರುವ ವಿ.ಕೆ.ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಅವರು, ಈ ಕೂಡಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ, ಇಲ್ಲದಿದ್ದರೆ ಪಕ್ಷದಲ್ಲಿರುವ ತಮ್ಮ ರಹಸ್ಯ ಬೆಂಬಲಿಗರ(ಸ್ಲೀಪರ್ ಸೆಲ್)ನ್ನು ಸೆಳೆಯುವುದಾಗಿ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡು ಸಿಎಂಗೆ ನೇರವಾಗಿಯೇ ಎಚ್ಚರಿಕೆ ನೀಡಿರುವ ದಿನಕರನ್ ಅವರು, ನನಗೆ ಹಲವು ಎಐಎಡಿಎಂಕೆ ಶಾಸಕರ ಬೆಂಬಲ ಇದೆ. ಹೀಗಾಗಿ ಅವರು ಈ ಕೂಡಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವುದು ಉತ್ತಮ ಎಂದಿದ್ದಾರೆ.
ಪಕ್ಷದಲ್ಲಿ ಹಲವು ಸ್ಲೀಪರ್ ಸೆಲ್ ಗಳಿದ್ದು, ಅವರು ಶೀಘ್ರದಲ್ಲೇ ತಮ್ಮ ಬಣ ಸೇರಿಕೊಳ್ಳಲಿದ್ದಾರೆ ಎಂದು ದಿನಕರನ್ ತಿಳಿಸಿದ್ದಾರೆ.
ಕಳೆದ ಸೋಮವಾರ ಮುಖ್ಯಮಂತ್ರಿ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಗೆ ಎಐಎಡಿಎಂಕೆ 21 ಶಾಸಕರು ಗೈರು ಆಗಿದ್ದು, ಆ ಶಾಸಕರೆಲ್ಲಾ ತಮ್ಮ ಬೆಂಬಲಿಗರು ಮತ್ತು ಪಳನಿಸ್ವಾಮಿ ಬದಲಾವಣೆಗೆ ಒತ್ತಾಯಿಸಿರುವುದಾಗಿ ದಿನಕರನ್ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


