ಮಹಾರಾಷ್ಟ್ರ: ಹಳಿ ತಪ್ಪಿದ ನಾಗ್ಪುರ-ಮುಂಬೈ ಡುರೊಂಟೊ ಎಕ್ಸ್ ಪ್ರೆಸ್ ರೈಲಿನ 5 ಬೋಗಿಗಳು, ಎಂಜಿನ್
ನಾಗ್ಪುರ-ಮುಂಬೈ ತುರಂತೊ ಎಕ್ಸ್ ಪ್ರೆಸ್ ರೈಲಿನ 5 ಬೋಗಿಗಳು ಮತ್ತು ಎಂಜಿನ್ ಗಳು ಇಂದು....

Published On :
ಮಹಾರಾಷ್ಟ್ರ: ನಾಗ್ಪುರ-ಮುಂಬೈ ತುರಂತೊ ಎಕ್ಸ್ ಪ್ರೆಸ್ ರೈಲಿನ 5 ಬೋಗಿಗಳು ಮತ್ತು ಎಂಜಿನ್ ಗಳು ಇಂದು ಮುಂಜಾನೆ ತಿತ್ವಾಲ ಸಮೀಪ ಹಳಿತಪ್ಪಿದೆ. ಅಪಘಾತದಲ್ಲಿ ಐವರಿಗೆ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಕಳೆದ 10 ದಿನಗಳಲ್ಲಿ ರೈಲು ಅಪಘಾತಕ್ಕೀಡಾಗುವ ನಾಲ್ಕನೇ ಘಟನೆಯಿದು.
ಪ್ರಸ್ತುತ ರಕ್ಷಣಾ ಕಾರ್ಯ ನಡೆಯುತ್ತಿದೆ. ಅಲ್ಲಿ ತೀವ್ರ ಮಳೆಯ ಕಾರಣದಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಹತ್ತಿರದ ಕಲ್ಯಾಣ ನಗರದಿಂದ ರಕ್ಷಣಾ ತಂಡ ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ತಕ್ಷಣವೇ ಧಾವಿಸಿದೆ.
ಇಂದು ಬೆಳಗ್ಗೆ 6.35ರ ಸುಮಾರಿಗೆ ರೈಲು ಹಳಿ ತಪ್ಪಿದೆ. ತೀವ್ರ ಮಳೆಯಿಂದ ಭೂಕುಸಿತ ಉಂಟಾಗಿ ರೈಲ್ವೆ ಹಳಿ ತಪ್ಪಿದೆ ಎನ್ನಲಾಗುತ್ತಿದೆ. ಅಧಿಕಾರಿಗಳು ಘಟನೆ ಕುರಿತು ಇನ್ನಷ್ಟೇ ಮಾಹಿತಿ ನೀಡಬೇಕಿದೆ.
ಮೊನ್ನೆ 25ರಂದು ಮುಂಬೈಯ ಹಾರ್ಬರ್ ಮಾರ್ಗದಲ್ಲಿ ಮಹಿಮ್ ಗೆ ಸಂಚರಿಸುತ್ತಿದ್ದ ಸ್ಥಳೀಯ ರೈಲು ಹಳಿ ತಪ್ಪಿ ಅಪಘಾತಕ್ಕೀಡಾಗಿತ್ತು. ಮೊದಲ ನಾಲ್ಕು ಕೋಚ್ ಗಳನ್ನು ರಕ್ಷಿಸಲು ಹೋಗಿ ತಾಂತ್ರಿಕ ದೋಷ ಕಂಡುಬಂದು ರೈಲಿನ ಆರು, ಏಳು, ಎಂಟು ಮತ್ತು ಒಂಭತ್ತನೇ ಬೋಗಿಗಳು ಅಪಘಾತಕ್ಕೀಡಾಗಿದ್ದವು.
ಸುಮಾರು ಆರು ಮಂದಿ ಸಣ್ಣ ಪುಟ್ಟ ಗಾಯಗಳಾಗಿ ಬಚಾವಾಗಿದ್ದರು. ಭೀಕರ ಪರಿಣಾಮ ಎದುರಾಗಿರಲಿಲ್ಲ.
ಅದಕ್ಕೆ ಎರಡು ದಿನ ಮೊದಲು ದೆಹಲಿಗೆ ತೆರಳುತ್ತಿದ್ದ ಕೈಫತ್ ಎಕ್ಸ್ ಪ್ರೆಸ್ ರೈಲು ಉತ್ತರ ಪ್ರದೇಶದ ಅರುಯ್ಯ್ಯ ಜಿಲ್ಲೆಯಲ್ಲಿ ಹಳಿ ತಪ್ಪಿ ಅಪಘಾತಕ್ಕೀಡಾಗಿ ಸುಮಾರು 81 ಮಂದಿ ಗಾಯಗೊಂಡಿದ್ದರು.
ಆಗಸ್ಟ್ 19ರಂದು ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಕಾಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೀಡಾಗಿ 22 ಮಂದಿ ಮೃತಪಟ್ಟು 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸಲು ನಾವು ಬಸ್ಸಿನ ಏರ್ಪಾಡು ಮಾಡುತ್ತಿದ್ದೇವೆ. ವೈದ್ಯರು ಮತ್ತು ಹಿರಿಯ ಅಧಿಕಾರಿಗಳು ಈಗಾಗಲೇ ಸ್ಥಳದಲ್ಲಿದ್ದಾರೆ ಎಂದು ಕೇಂದ್ರ ರೈಲ್ವೆ ಟ್ವೀಟ್ ಮಾಡಿದೆ.
ವಾಸಿಂದ್ ಮತ್ತು ಅಸಂಗೌನ್ ಸ್ಟೇಷನ್ ಹತ್ತಿರ ರೈಲು ಹಳಿ ತಪ್ಪಿದೆ. ರೈಲು ಇಂದು ಬೆಳಗ್ಗೆ 7.55ಕ್ಕೆ ಮುಂಬೈ ತಲುಪಬೇಕಾಗಿತ್ತು.
ಮುಂಬೈ ಮತ್ತು ನಾಗ್ಪುರ ನಡುವೆ ರೈಲು ಸಂಚಾರಕ್ಕೆ ಅಡಚಣೆಯುಂಟಾಗಿದೆ.
ಎದುರಿಗೆ ಭೂ ಕುಸಿತವುಂಟಾಗಿದ್ದು ಕಂಡು ರೈಲಿನ ಚಾಲಕ ತಕ್ಷಣವೇ ಬ್ರೇಕ್ ಹಾಕಿದ್ದರಿಂದ ರೈಲು ಹಳಿ ತಪ್ಪಿರಬಹುದು.
ಕೆಲವರು ಸೀಟಿನಿಂದ ಕೆಳಗೆ ಬಿದ್ದರು. ಕೆಲವು ಬೋಗಿಗಳಲ್ಲ ಸಣ್ಣ ಬೆಂಕಿ ಕಾಣಿಸಿಕೊಂಡಿತು. ಅದನ್ನು ಪ್ರಯಾಣಿಕರು ನಂದಿಸಿದರು ಎಂದು ಪ್ರಯಾಣಿಕರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಹಾರಾಷ್ಟ್ರMaharashtratrainರೈಲುಹಳಿ ತಪ್ಪುDerailementNagpur-Mumbai Duronto Expressನಾಗ್ಪುರ-ಮುಂಬೈ ತುರಂತೊ ಎಕ್ಸ್ ಪ್ರೆಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


