ಹರ್ಯಾಣ: ಎರಡು ಅಪರಾಧ ಪ್ರಕರಣಗಳಲ್ಲಿ ಬಾಬಾ ರಾಮ್ ಪಾಲ್ ಖುಲಾಸೆ
ಹಿಸ್ಸಾರ್ ನ್ಯಾಯಾಲಯ ಮಂಗಳವಾರ ಸ್ವಯಂಘೋಷಿತ ದೇವ ಮಾನವ ರಾಮ್ ಪಾಲ್ ದಾಸ್ ಅವರನ್ನು ಮತ್ತು ಆತನ ಅನುಯಾಯಿಗಳ ವಿರುದ್ಧದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಖುಲಾಸೆಗೊಳಿಸಿದೆ.

Published On :
ಹರಿಯಾಣ: ಹಿಸ್ಸಾರ್ ನ್ಯಾಯಾಲಯ ಮಂಗಳವಾರ ಸ್ವಯಂಘೋಷಿತ ದೇವ ಮಾನವ ರಾಮ್ ಪಾಲ್ ದಾಸ್ ಅವರನ್ನು ಮತ್ತು ಆತನ ಅನುಯಾಯಿಗಳ ವಿರುದ್ಧದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಖುಲಾಸೆಗೊಳಿಸಿದೆ.
ಹಿಸ್ಸಾರ್ ನ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಮುಖೇಶ್ ಕುಮಾರ್ ಅವರು ತೀರ್ಪು ನೀಡಿದ್ದು 2 ಕ್ರಿಮಿನಲ್ ಕೇಸ್ ಗಳಲ್ಲಿ ಸತ್ ಲೋಕ್ ಆಶ್ರಮದ ಸ್ಥಾಪಕ ರಾಮ್ ಪಾಲ್ ಖುಲಾಸೆಗೊಂಡಿರುವುದಾಗಿ ತೀರ್ಪು ಹೊರ ಬಿದ್ದಿದೆ.
ರಾಮ್ ಪಾಲ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 426 ಮತ್ತು 427ರ ಅಡಿ ಎರಡು ಪ್ರಕರಣಗಳು ದಾಖಲಾಗಿದ್ದವು. ಈಗ ಆ ಎರಡು ಪ್ರಕರಣಗಳಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ವಕೀಲ ಎಪಿ ಸಿಂಗ್ ಹೇಳಿದರು.
ಆದರೆ ರಾಮ್ ಪಾಲ್ ಮೇಲೆ ಹೇರಲಾಗಿರುವ ಕೊಲೆ ಆರೋಪ ಸೇರಿದಂತೆ ಬೇರೆ ಪ್ರಕರಣಗಳ ವಿಚಾರಣೆ ಮುಂದುವರ್ತಿದಿರುವ ಕಾರಣ ಜೈಲುವಾಸ ಮುಂದುವರಿಯಲಿದೆ ಎಂದು ವರದಿ ವಿವರಿಸಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


