ಮೊದಲು ಎಚ್ಚರಿಕೆ.. ನಂತರ ಬುಲೆಟ್: ಹಿಂಸಾಚಾರಿಗಳಿಗೆ ರೋಹ್ಟಕ್ ಪೊಲೀಸ್ ಎಚ್ಚರಿಕೆ!
ಅತ್ಯಾಚಾರಿ ಬಾಬಾಗೆ ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ಹಿಂಸಾಚಾರಿಗಳಿಗೆ ರೋಹ್ಟಕ್ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದು, ಮಿತಿ ಮೀರಿದರೆ ಗುಂಡಿನ ದಾಳಿ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಚಂಡೀಘಢ: ಅತ್ಯಾಚಾರಿ ಬಾಬಾಗೆ ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ಹಿಂಸಾಚಾರಿಗಳಿಗೆ ರೋಹ್ಟಕ್ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದು, ಮಿತಿ ಮೀರಿದರೆ ಗುಂಡಿನ ದಾಳಿ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೋಹ್ಟಕ್ ಪೊಲೀಸ್ ಉಪಾಯುಕ್ತ ಅತುಲ್ ಕುಮಾರ್ ಅವರು, ಹಿಂಸಾಚಾರಕ್ಕಿಳಿಯುವ ದುಷ್ಕರ್ಮಿಗಳಿಗೆ ಮೊದಲು ಎಚ್ಚರಿಕೆ ನೀಡಿ. ಆಗಲೂ ಮಿತಿ ಮೀರಿ ವರ್ತಿಸಿದರೆ ಬಳಿಕ ಬುಲೆಟ್ ಗಲ ಮೂಲಕ ಉತ್ತರಿಸಿ ಎಂದು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರೋಹ್ಟಕ್ ನ ಸುನಾರಿಯಾ ಕೇಂದ್ರ ಕಾರಾಗೃಹದಲ್ಲಿ ಇಂದು ಅತ್ಯಾಚಾರಿ ಬಾಬಾ ಗುರ್ಮಿತ್ ರಾಮ್ ರಹೀಮ್ ಸಿಂಗ್ ಗೆ ಶಿಕ್ಷೆ ಪ್ರಮಾಣ ಘೋಷಣೆ ಮಾಡಲಿದ್ದು, ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕ ಘಟನೆ ನಡೆಯದಂತೆ ಭಾರಿ ಭದ್ರತೆ ಒದಗಿಸಲಾಗಿದೆ. ಹೀಗಿದ್ದೂ ದುಷ್ಕರ್ಮಿಗಳು ಹಿಂಸಾಚಾರಕ್ಕೆ ಇಳಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ರೋಹ್ಟಕ್ ಜನತೆ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ನಗರಾದ್ಯಂತ ಸೂಕ್ತ ಭದ್ರತೆ ಮಾಡಲಾಗಿದೆ. ಹಿಂಸಾಚಾರಕ್ಕಿಳಿಯುವವರಿಗೆ ಈ ಬಾರಿ ಕಠಿಣ ಪಾಠ ಕಲಿಸಲಿದ್ದೇವೆ. ರೋಹ್ಟಕ್ ನಲ್ಲಿ ಯಾರೂ ಕೂಡ ಯಾವುದೇ ರೀತಿಯ ಸಾರ್ವಜನಕರಿಗೆ ತೊಂದರೆ ನೀಡುವಂತಹ ಕಾರ್ಯಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಭದ್ರತಾ ಪಡೆಗಳಿಗೆ ಸೂಚನೆ ನೀಡಿರುವ ಉಪಾಯುಕ್ತ ಅತುಲ್ ಕುಮಾರ್ ಅವರು, ಮೊದಲು ಎಚ್ಚರಿಕೆ ನೀಡಿ. ಆಗಲೂ ಹಿಂಸಾಚಾರ ಕೈ ಬಿಡದಿದ್ದರೆ ಗುಂಡಿನ ದಾಳಿ ನಡೆಸಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ರೋಹ್ಟಕ್ ನಲ್ಲಿ ಸಿಐಎಸ್ ಎಫ್, ಬಿಎಸ್ ಎಫ್ ಹಾಗೂ ಕೇಂದ್ರೀಯ ಮೀಸಲು ಪಡೆಯ ಒಟ್ಟು 8 ತುಕಡಿಗಳನ್ನು ನಿಯೋಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


