ರಾಷ್ಟ್ರಮಟ್ಟದಲ್ಲಿ ಮತ್ತೊಂದು "ಮಹಾಮೈತ್ರಿ ಕೂಟ" ರಚಿಸುತ್ತೇವೆ: ಶರದ್ ಯಾದವ್
ಎನ್ ಡಿಎ ಮೈತ್ರಿಕೂಟವನ್ನು ಮಣಿಸಲು ರಾಷ್ಟ್ರಮಟ್ಟದಲ್ಲಿ ಮತ್ತೊಂದು ‘ಮಹಾಮೈತ್ರಿ’ಯನ್ನು ರಚಿಸುತ್ತೇವೆ ಎಂದು ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಭಾನುವಾರ ಹೇಳಿದ್ದಾರೆ.

ಪಾಟ್ನಾ: ಎನ್ ಡಿಎ ಮೈತ್ರಿಕೂಟವನ್ನು ಮಣಿಸಲು ರಾಷ್ಟ್ರಮಟ್ಟದಲ್ಲಿ ಮತ್ತೊಂದು ‘ಮಹಾಮೈತ್ರಿ’ಯನ್ನು ರಚಿಸುತ್ತೇವೆ ಎಂದು ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಭಾನುವಾರ ಹೇಳಿದ್ದಾರೆ.
ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪಾಟ್ನಾದಲ್ಲಿ ಹಮ್ಮಿಕೊಂಡಿದ್ದ ‘ಬಿಜೆಪಿ ತೊಲಗಿಸಿ-ದೇಶ ಉಳಿಸಿ’ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಶರದ್ ಯಾದವ್ ಅವರು, ರಾಷ್ಟ್ರಮಟ್ಟದಲ್ಲಿ ಮತ್ತೊಂದು ಮಹಾಮೈತ್ರಿಯನ್ನು ನಾವು ರಚಿಸುತ್ತೇವೆ ಎಂದು ಬಿಹಾರದಲ್ಲಿ ಮಹಾಮೈತ್ರಿಯನ್ನು ಮುರಿದವರಿಗೆ ಹೇಳಲು ಇಚ್ಛಿಸುತ್ತೇನೆ ಎಂದು ಹೇಳಿದರು.
ಆ ಮೂಲಕ ನೇರವಾಗಿ ಸಿಎಂ ನಿತೀಶ್ ಕುಮಾರ್ ಅವರನ್ನು ಕೇಂದ್ರವಾಗಿಸಿಕೊಂಡ ಶರದ್ ಯಾದವ್ ಅವರು, ಬಿಹಾರದಲ್ಲಿ ಜೆಡಿಯು-ಆರ್ ಜೆಡಿ ಹಾಗೂ ಕಾಂಗ್ರೆಸ್ ಮಹಾಮೈತ್ರಿಯನ್ನು ಮುರಿದಿರುವುದು ಬಿಹಾರದ ಜನತೆಗೆ ಮಾಡಿದ ನಂಬಿಕೆದ್ರೋಹವಾಗಿದೆ ಹಾಗೂ ಅವರ ಆದೇಶದ ವಿರುದ್ಧವಾಗಿದೆ. ಜನರಿಗೆ ಮೋಸ ಮಾಡಲಾಗಿದೆ. 1.25 ಕೋಟಿ ಜನರ ಮಹಾಮೈತ್ರಿಯನ್ನು ಸ್ಥಾಪಿಸುವುದಕ್ಕಾಗಿ ದೇಶದ ಮೂಲೆಮೂಲೆಗೂ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಇದೇ ವೇಳೆ "ರಾಜಕೀಯದಲ್ಲಿ ಧರ್ಮ ವಿಲೀನವಾದರೆ ಅಲ್ಲಿ ದೊಡ್ಡ ದುರಂತವೇ ಸಂಭವಿಸುತ್ತದೆ. ಇದೇ ದುರಂತ ಇರಾಕ್ ಮತ್ತು ಆಫ್ಘಾನಿಸ್ತಾನ ದೇಶಗಳಲ್ಲಾಗಿದೆ. ಆ ದೇಶಗಳಲ್ಲಿ ಇಂದಿಗೂ ಜನ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಬಿಜೆಪಿ ದೇಶವನ್ನು ವಿಭಜಿಸುವತ್ತ ಚಿತ್ತ ನೆಟ್ಟಿದೆ. ಆದರೆ ಅದಕ್ಕೆ ನಾನು ನನ್ನ ಕೊನೆಯ ಉಸಿರು ಇರುವವರೆಗೂ ಬಿಡುವುದಿಲ್ಲ. ಕಳೆದ 43 ವರ್ಷಗಳಿಂದ ನಾನು ಸಂಸದನಾಗಿದ್ದೇನೆ. ನನ್ನ ಅಂತಿಮ ಕ್ಷಣದವರೆಗೂ ಹೋರಾಟ ಮಾಡುತ್ತೇನೆ. ಇನ್ನು ಕೆಲವೇ ದಿನಗಳಲ್ಲಿ ಜೆಡಿಯು ನಮ್ಮ ಪಕ್ಷ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತೇನೆ ಎಂದು ಶರದ್ ಯಾದವ್ ಸವಾಲು ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


