ದೇಶ

ಮಗುವಿನ ಅಸಭ್ಯ ಚಿತ್ರ ಟ್ವಿಟ್ಟರ್ ನಲ್ಲಿ ಪೋಸ್ಟ್: ಬಾಲಿವುಡ್ ನಟ ರಿಷಿ ಕಪೂರ್ ವಿರುದ್ಧ ದೂರು

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಗುವಿನ ಅಸಭ್ಯ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಬಾಲಿವುಡ್ ನ ಹಿರಿಯ...

ಮಗುವಿನ ಅಸಭ್ಯ ಚಿತ್ರ ಟ್ವಿಟ್ಟರ್ ನಲ್ಲಿ ಪೋಸ್ಟ್: ಬಾಲಿವುಡ್ ನಟ ರಿಷಿ ಕಪೂರ್ ವಿರುದ್ಧ ದೂರು
ಬಾಲಿವುಡ್ ನಟ ರಿಷಿ ಕಪೂರ್
Published On :
ಮುಂಬೈ: ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಗುವಿನ ಅಸಭ್ಯ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಬಾಲಿವುಡ್ ನ ಹಿರಿಯ ನಟ ರಿಶಿ ಕಪೂರ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸರ್ಕಾರೇತರ ಸಂಘಟನೆ ಸೈಬರ್ ಪೊಲೀಸರಿಗೆ ಪತ್ರ ಬರೆದಿದೆ.
ಮುಂಬೈಯ ಜೈಹೊ ಫೌಂಡೇಶನ್ ಅಧ್ಯಕ್ಷ ಅಫ್ರೋಜ್ ಮಲಿಕ್ ಸೈಬರ್ ಪೊಲೀಸರಿಗೆ ಪತ್ರ ಬರೆದಿದ್ದು, ಸಂಬಂಧಪಟ್ಟ ಪೊಕ್ಸೊ ಕಾಯ್ದೆಯ ಸಂಬಂಧಪಟ್ಟ ಸೆಕ್ಷನ್ ನಡಿ   ನಟ ರಿಶಿ ಕಪೂರ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ರಿಶಿ ಕಪೂರ್ ಅವರಿಗೆ ಟ್ವಿಟ್ಟರ್ ನಲ್ಲಿ 2.6 ದಶಲಕ್ಷಕ್ಕೂ ಅಧಿಕ  ಅನುಯಾಯಿಗಳಿದ್ದಾರೆ. ಅವರು ಪೋಸ್ಟ್ ಮಾಡಿದ ಮಗುವಿನ ಅಶ್ಲೀಲ ಚಿತ್ರ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿಗೆ ವರ್ಗಾವಣೆಯಾಗಿದ್ದು, ಇದು ಕೆಟ್ಟ ಸಂದೇಶ ಸಾರುತ್ತದೆ. ಈ ಟ್ವೀಟ್ ಗೆ 62 ರಿಟ್ವೀಟ್ ಮತ್ತು 376 ಲೈಕ್ಸ್ ಗಳು ಬಂದಿವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. 
ನಟ ರಿಶಿ ಕಪೂರ್ ಮಗುವಿನ ಚಿತ್ರವೊಂದನ್ನು ಟ್ವೀಟ್ ಮಾಡಿ ವಿವಾದವೆದ್ದ ನಂತರ ಅದನ್ನು ಡಿಲೀಟ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.