ದೇಶ

ದೇವರನ್ನು ಹೊರತುಪಡಿಸಿದರೆ ನನ್ನನ್ನು ಬೆದರಿಸಲು ಯಾರಿಂದಲೂ ಸಾಧ್ಯವಿಲ್ಲ: ಟಿಟಿವಿ ದಿನಕರನ್

ತ್ಯಾಗ ಮತ್ತು ನಂಬಿಕೆ ದ್ರೋಹದ ನಡುವೆ ಕದನ ಆರಂಭವಾಗಿದ್ದು, ದೇವರನ್ನು ಹೊರತು ಪಡಿಸಿದರೆ ನನ್ನನ್ನು ಬೆದರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ...

ದೇವರನ್ನು ಹೊರತುಪಡಿಸಿದರೆ ನನ್ನನ್ನು ಬೆದರಿಸಲು ಯಾರಿಂದಲೂ ಸಾಧ್ಯವಿಲ್ಲ: ಟಿಟಿವಿ ದಿನಕರನ್
ಎಐಎಡಿಎಂಕೆ ಉಚ್ಛಾಟಿತ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್
Published On :
ಚೆನ್ನೈ: ತ್ಯಾಗ ಮತ್ತು ನಂಬಿಕೆ ದ್ರೋಹದ ನಡುವೆ ಕದನ ಆರಂಭವಾಗಿದ್ದು, ದೇವರನ್ನು ಹೊರತು ಪಡಿಸಿದರೆ ನನ್ನನ್ನು ಬೆದರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಐಎಡಿಎಂಕೆ ಉಚ್ಛಾಟಿತ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಶನಿವಾರ ಹೇಳಿದ್ದಾರೆ. 
ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಬಣ ಹಾಗೂ ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೇಲ್ವಂ ಬಣ ವಿಲೀನಗೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಟಿಟಿವಿ ದಿನಕರನ್ ಅವರು, ಹಣ ಎಂಬುದು ದೊಡ್ಡ ವಿಚಾರವಲ್ಲ. ಹಣದಿಂದ ಅವರು ಶಾಸಕರನ್ನು ಖರೀದಿ ಮಾಡಲು ಸಾಧ್ಯವಿಲ್ಲ. ತ್ಯಾಗ ಮತ್ತು ನಂಬಿಕೆ ದ್ರೋಹದ ನಡುವೆ ಕದನ ಆರಂಭವಾಗಿದ್ದು, ದೇವರನ್ನು ಹೊರತು ಪಡಿಸಿದರೆ ನನ್ನನ್ನು ಬೆದರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
19 ಶಾಸಕರು ಯಾರಿಂದಲೂ ಭಯ ಪಡುತ್ತಿಲ್ಲ. ವಿ.ಕೆ. ಶಶಿಕಲಾ ಅವರಿಗೆ ದ್ರೋಹ ಮಾಡಲು ಯತ್ನ ನಡೆಸಿದ್ದವರಿಗೆ ಪಾಠ ಕಲಿಸಲು ಶಾಸಕರು ಬಯಸುತ್ತಿದ್ದಾರೆ. ನಿಜವಾದ ಎಐಎಡಿಎಂಕೆ ಕಾರ್ಯಕರ್ತರು ಇದೀಗ ನನ್ನ ಬೆನ್ನ ಹಿಂದೆ ಇದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.