ದೇಶ

ನಿತಾಖತ್ ಪರಿಷ್ಕರಣೆ: ಸೌದಿಯಲ್ಲಿ ವಲಸಿಗ ಭಾರತೀಯ ಕೆಲಸಕ್ಕೆ ಕತ್ತರಿ ಸಾಧ್ಯತೆ

ಸೌದಿ ಅರೇಬಿಯಾದ ಸ್ಥಳಿಯ ನಾಗರಿಕರಿಗೆ ಹೆಚ್ಚಿನ ಉದ್ಯೋಗ ನೀಡುವುದಕ್ಕಾಗಿ ಅಲ್ಲಿನ ಸರ್ಕಾರ ನಿತಾಖತ್ ಯೋಜನೆಯನ್ನು ಪರಿಷ್ಕರಣೆ ಮಾಡಿದ್ದು, ಭಾರತೀಯರ ಮೇಲೆ ಇದರ ಪರಿಣಾಮ ಉಂಟಾಗಲಿದೆ.

ನಿತಾಖತ್ ಪರಿಷ್ಕರಣೆ: ಸೌದಿಯಲ್ಲಿ ವಲಸಿಗ ಭಾರತೀಯ ಕೆಲಸಕ್ಕೆ ಕತ್ತರಿ ಸಾಧ್ಯತೆ
ಸೌದಿ ಅರೇಬಿಯಾ
Published On :
ನವದೆಹಲಿ: ಸೌದಿ ಅರೇಬಿಯಾದ ಸ್ಥಳಿಯ ನಾಗರಿಕರಿಗೆ ಹೆಚ್ಚಿನ ಉದ್ಯೋಗ ನೀಡುವುದಕ್ಕಾಗಿ ಅಲ್ಲಿನ ಸರ್ಕಾರ ನಿತಾಖತ್ ಯೋಜನೆಯನ್ನು ಪರಿಷ್ಕರಣೆ ಮಾಡಿದ್ದು, ಭಾರತೀಯರ ಮೇಲೆ ಇದರ ಪರಿಣಾಮ ಉಂಟಾಗಲಿದೆ. 
ಸೌದಿಯಲ್ಲಿ ಕೆಲಸ ಮಾಡುತ್ತಿರುವ ವಲಸಿಗ ಭಾರತೀಯರಿಗೆ ಸೌದಿ ಸರ್ಕಾರದ ನಿರ್ಧಾರದಿಂದ ಹೊಡೆತ ಬೀಳಲಿದ್ದು, ಉದ್ಯೋಗಾವಕಾಶದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸೆಪ್ಟೆಂಬರ್ ತಿಂಗಳಿನಿಂದ ಪರಿಷ್ಕೃತ ಯೋಜನೆ ಜಾರಿಗೆ ಬರಲಿದ್ದು, ಹೆಚ್ಚಿನ ಉದ್ಯೋಗಗಳಿಂದ ಭಾರತೀಯರು ವಂಚಿತರಾಗುವ ಸಾಧ್ಯತೆ ಇದೆ. 
ಕಳೆದ ವರ್ಷದ ಅಂಕಿ-ಅಂಶಗಳ ಪ್ರಕಾರ ಸೌದಿಯಲ್ಲಿ ಸುಮಾರು 25 ಲಕ್ಷ ಭಾರತೀಯರು ಉದ್ಯೋಗದಲ್ಲಿದ್ದು, ಸೌದಿ ಕಾನೂನು ಬದಲಾವಣೆಯಾಗುತ್ತಿರುವುದರಿಂದ ವಲಸೆ ಹೋಗುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.