ಎಐಎಡಿಎಂಕೆ ವಿಲೀನಕ್ಕೆ ವೇದಿಕೆ ಸಿದ್ಧ; ಚೆನ್ನೈನತ್ತ ರಾಜ್ಯಪಾಲ ವಿದ್ಯಾಸಾಗರ ರಾವ್!
ಮಾಜಿ ಸಿಎಂ ಜೆ ಜಯಲಲಿತಾ ಅವರ ನಿಧನದ ಬಳಿಕ ಇಬ್ಭಾಗವಾಗಿದ್ದ ಎಐಎಡಿಎಂಕೆ ಪಕ್ಷ ಮತ್ತೆ ಒಂದಾಗುವ ಕಾಲ ಬಂದಿದ್ದು, ಪನ್ನೀರ್ ಸೆಲ್ವಂ ಬಣ ಹಾಗೂ ಪಳನಿಸ್ವಾಮಿ ಬಣಗಳ ವಿಲೀನಕ್ಕೆ ವೇದಿಕೆ ಸಿದ್ಧವಾಗಿದೆ.

ಚೆನ್ನೈ: ಮಾಜಿ ಸಿಎಂ ಜೆ ಜಯಲಲಿತಾ ಅವರ ನಿಧನದ ಬಳಿಕ ಇಬ್ಭಾಗವಾಗಿದ್ದ ಎಐಎಡಿಎಂಕೆ ಪಕ್ಷ ಮತ್ತೆ ಒಂದಾಗುವ ಕಾಲ ಬಂದಿದ್ದು, ಪನ್ನೀರ್ ಸೆಲ್ವಂ ಬಣ ಹಾಗೂ ಪಳನಿಸ್ವಾಮಿ ಬಣಗಳ ವಿಲೀನಕ್ಕೆ ವೇದಿಕೆ ಸಿದ್ಧವಾಗಿದೆ.
ಮೂಲಗಳ ಪ್ರಕಾರ ಇಂದೇ ಉಭಯ ಬಣಗಳು ವಿಲೀನವಾಗಲಿದೆ ಎಂದು ಹೇಳಲಾಗುತ್ತಿದ್ದು, ಶೀಘ್ರದಲ್ಲೇ ಸಿಎಂ ಇ ಪಳನಿ ಸ್ವಾಮಿ ಅವರು ತಮ್ಮ ಸಂಪುಟ ಪುನಾರಚನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶುಕ್ರವಾರವೇ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವ ಕುರಿತು ಮಾಹಿತಿ ಹಬ್ಬಿತ್ತಾದರೂ, ವಿಲೀನದ ಬಳಿಕ ಪನ್ನೀರ್ ಸೆಲ್ವಂ ಅವರಿಗೆ ನೀಡಬೇಕಾದ ಸ್ಥಾನ ಹಾಗೂ ಅವರ ಬೇಡಿಕೆ ಇಡೇರಿಕೆ ಕುರಿತು ಸಾಕಷ್ಟು ಅನುಮಾನಗಳ ವ್ಯಕ್ತವಾಗಿದ್ದವು. ಈ ಹಿನ್ನಲೆಯಲ್ಲಿ ವಿಲೀನ ಪ್ರಕ್ರಿಯೆಯನ್ನು ಮತ್ತೆರಡು ದಿನಗಳ ಮುಂದೂಡಲಾಗಿತ್ತು. ಇನ್ನು ಈ ಹಿಂದೆ ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದಿದ್ದ ಪನ್ನೀರ್ ಸೆಲ್ವಂ ಅವರು ತಮ್ಮ ಪಟ್ಟನ್ನು ಸಡಿಲಿಸಿದ್ದು,ಇದೀಗ ಉಪ ಮುಖ್ಯಮಂತ್ರಿ ಹುದ್ದೆಗೆ ತಾವು ಸಿದ್ಧ ಎಂದು ಹೇಳಿದ್ದಾರೆ.
ಆದರೆ ಸಂಪುಟದಲ್ಲಿ ತಮ್ಮ ಬಣದ ಶಾಸಕರಿಗೆ ಪ್ರಮುಖ ಖಾತೆ ನೀಡುವಂತೆ ಪನ್ನೀರ್ ಸೆಲ್ವಂ ಆಗ್ರಹಿಸಿದ್ದಾರೆ ಎಂದು ಹೇಲಾಗುತ್ತಿದೆ. ಇದಲ್ಲದೆ ಈ ಹಿಂದೆ ಪನ್ನೀರ್ ಸೆಲ್ವಂ ಬಣ ಮುಂದಿಟ್ಟಿದ್ದ ಹಲವು ಬೇಡಿಕೆಗಳ ಈಡೇರಿಕೆ ಬಗ್ಗೆಯೂ ಸ್ಪಷ್ಟ ನಿಲುವು ತೆಗುದುಕೊಳ್ಳುವ ಸಾಧ್ಯತೆ ಇದೆ. ಪ್ರಮುಖವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ಮತ್ತು ಅವರ ತಂಡವನ್ನು ಪಕ್ಷದಿಂದ ಶಾಶ್ವತವಾಗಿ ಹೊರಹಾಕುವುದು ಮತ್ತು ಶಶಿಕಲಾ ಬಣದ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಒಪಿಎಸ್ ಬಣ ಮುಂದಿಟ್ಟಿದೆ ಎಂದು ಹೇಳಲಾಗುತ್ತಿದೆ.
ಚೆನ್ನೈನತ್ತ ರಾಜ್ಯಪಾಲ ವಿದ್ಯಾಸಾಗರ ರಾವ್
ಇನ್ನು ತಮಿಳುನಾಡು ರಾಜಕೀಯ ಬೆಳವಣಿಗೆಗಳ ಹಿನ್ನಲೆಯಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಪಾಲರಾಗಿರುವ ವಿದ್ಯಾಸಾಗರ ರಾವ್ ಅವರು ಮಹಾರಾಷ್ಟ್ರದಲ್ಲಿ ತಮ್ಮೆಲ್ಲಾ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಚೆನ್ನೈನತ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ವಿದ್ಯಾಸಾಗರ್ ರಾವ್ ಅವರು ತಮ್ಮ ಎಲ್ಲ ಅಪಾಯಿಂಟ್ ಮೆಂಟ್ ಗಳನ್ನು ರದ್ದುಗೊಳಿಸಿ, ಚೆನ್ನೈನತ ದೌಡಾಯಿಸಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


