ನಾವು ಒಂದೇ ಅಮ್ಮನ ಮಕ್ಕಳು, ಅಮ್ಮನ ಆತ್ಮದ ಪ್ರೇರಣೆಯಿಂದಲೇ ವಿಲೀನ: ಒಪಿಎಸ್, ಇಪಿಎಸ್ ಹೇಳಿಕೆ
ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಎರಡು ಬಣಗಳು ವಿಲೀನಗೊಂಡಿದ್ದು, ಮಾಜಿ ಸಿಎಂ ಜಯಲಲಿತಾ ಅವರ ಆತ್ಮದ ಪ್ರೇರಣೆಯಿಂದಲೇ ಎಐಎಡಿಎಂಕೆ ವಿಲೀನ ಸಾಧ್ಯವಾಗಿದೆ ಎಂದು ಪನ್ನೀರ್ ಸೆಲ್ವಂ ಹಾಗೂ

Published On :
ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಎರಡು ಬಣಗಳು ವಿಲೀನಗೊಂಡಿದ್ದು, ಮಾಜಿ ಸಿಎಂ ಜಯಲಲಿತಾ ಅವರ ಆತ್ಮದ ಪ್ರೇರಣೆಯಿಂದಲೇ ಎಐಎಡಿಎಂಕೆ ವಿಲೀನ ಸಾಧ್ಯವಾಗಿದೆ ಎಂದು ಪನ್ನೀರ್ ಸೆಲ್ವಂ ಹಾಗೂ ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ.
ವಿಲೀನ ಪ್ರಕ್ರಿಯೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಪಳನಿಸ್ವಾಮಿ ಹಾಗೂ ಪನ್ನೀರ್ ಸೆಲ್ವಂ, ನಾವು ಒಂದೇ ಅಮ್ಮನ ಮಕ್ಕಳಾಗಿದ್ದೇವೆ, ಅಮ್ಮನ ಆತ್ಮದ ಪ್ರೇರಣೆಯಿಂದಲೇ ವಿಲೀನ ಸಾಧ್ಯವಾಗಿದೆ. ನಮ್ಮನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ, ಎಐಎಡಿಎಂಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸದೃಢವಾಗಲಿದೆ ಎಂದು ಹೇಳಿದ್ದಾರೆ.
ಎಐಎಡಿಎಂಕೆ ಪಕ್ಷಕ್ಕೆ ಎಂಜಿಆರ್ ಹಾಗೂ ಜಯಲಲಿತಾ ಅವರ ಕೊಡುಗೆ ಅಪಾರವಾಗಿದೆ. ಪನ್ನೀರ್ ಸೆಲ್ವಂ ನಮ್ಮೆಲ್ಲರ ಪಾಲಿಗೆ ಓರ್ವ ಅಣ್ಣನಿದ್ದಂತೆ, ಒಗ್ಗಟ್ಟಿನಿಂದ ಎಂಜಿಆರ್, ಜಯಲಲಿತಾ ಕನಸನ್ನು ನನಸು ಮಾಡುತ್ತೇವೆ ಎಂದು ಉಭಯ ನಾಯಕರೂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


