2019 ಕ್ಕೆ ಕೇರಳದಲ್ಲಿ 9 ಲಕ್ಷ ಕಾರ್ಯಕರ್ತರನ್ನು ಹೊಂದಲು ಆರ್ ಎಸ್ಎಸ್ ಗುರಿ
ಕೇರಳದಲ್ಲಿ ತನ್ನ ಕಾರ್ಯಪಡೆಯನ್ನು ಹೆಚ್ಚಿಸಿಕೊಳ್ಳಲು ಆರ್ ಎಸ್ಎಸ್ ನಿರ್ಧರಿಸಿದ್ದು, 2019 ರ ವೇಳೆಗೆ 9 ಲಕ್ಷ ಕಾರ್ಯಕರ್ತರನ್ನು ಹೊಂದುವ ಗುರಿ ಇಟುಕೊಂಡಿದೆ.

Published On :
ನವದೆಹಲಿ: ಕೇರಳದಲ್ಲಿ ತನ್ನ ಕಾರ್ಯಪಡೆಯನ್ನು ಹೆಚ್ಚಿಸಿಕೊಳ್ಳಲು ಆರ್ ಎಸ್ಎಸ್ ನಿರ್ಧರಿಸಿದ್ದು, 2019 ರ ವೇಳೆಗೆ 9 ಲಕ್ಷ ಕಾರ್ಯಕರ್ತರನ್ನು ಹೊಂದುವ ಗುರಿ ಇಟುಕೊಂಡಿದೆ.
ಆರ್ ಎಸ್ಎಸ್ ನ ಹಿರಿಯ ಸ್ವಯಂ ಸೇವಕ ಎನ್ ನಂದಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೇರಳದಲ್ಲಿ ಆರ್ ಎಸ್ಎಸ್ ನ ಕಾರ್ಯಕರ್ತರ ಮೇಲೆ ದಾಳಿಗಳು ಹೆಚ್ಚುತ್ತಿವೆ. ಆದರೂ ಸ್ವಯಂ ಸೇವಕ ಸಂಘ ಕೇರಳದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದೆ.
ಕೇರಳದಲ್ಲಿ ನಡೆದಿರುವ ದಾಳಿಗಳು ವಾಸ್ತವದಲ್ಲಿ ರಾಷ್ಟ್ರೀಯತೆ ಹಾಗೂ ಸಮಾಜದೆಡೆಗಿನ ನಮ್ಮ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಇನ್ನೂ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ, 2019 ರ ವೇಳೆಗೆ 9 ಲಕ್ಷ ಕಾರ್ಯಕರ್ತರನ್ನು ಹೊಂದುವ ಗುರಿ ಇದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ 5,000 ಶಾಖೆಗಳು ನಡೆಯುತ್ತಿವೆ, ಗುಜರಾತ್ ನಲ್ಲಿ 1,000 ಶಾಖೆಗಳು ನಡೆಯುತ್ತಿವೆ, ಆರ್ ಎಸ್ಎಸ್ ಗೆ ಹೆಚ್ಚು ಜನರು ಸೇರ್ಪಡೆಗೊಳ್ಳುತ್ತಿರುವುದರಿಂದ ಎಡಪಕ್ಷಗಳ ನೆಲೆ ಕುಗ್ಗುತ್ತಿದೆ ಎಂದು ನಂದಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


