ದೇಶ

ಬಿಜೆಪಿ ಇರುವುದು ದೀರ್ಘಾವಧಿಯ ಅಧಿಕಾರಕ್ಕಾಗಿ: ಅಮಿತ್ ಷಾ

ಬಿಜೆಪಿ ಇರುವುದು ಕೇವಲ 5-10 ವರ್ಷಗಳ ಆಡಳಿತಕ್ಕಾಗಿ ಅಲ್ಲ, ಕನಿಷ್ಠ 50 ವರ್ಷಗಳ ಆಡಳಿತಕ್ಕಾಗಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದು, ಪಕ್ಷವನ್ನು ದೇಶದ ಮೂಲೆ ಮೂಲೆಗೂ ಕೊಂಡೊಯ್ಯುವಂತೆ..

ಬಿಜೆಪಿ ಇರುವುದು ದೀರ್ಘಾವಧಿಯ ಅಧಿಕಾರಕ್ಕಾಗಿ: ಅಮಿತ್ ಷಾ
ಅಮಿತ್ ಷಾ
Published On :
ಭೋಪಾಲ್: ಬಿಜೆಪಿ ಇರುವುದು ಕೇವಲ 5-10 ವರ್ಷಗಳ ಆಡಳಿತಕ್ಕಾಗಿ ಅಲ್ಲ, ಕನಿಷ್ಠ 50 ವರ್ಷಗಳ ಆಡಳಿತಕ್ಕಾಗಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದು, ಪಕ್ಷವನ್ನು ದೇಶದ ಮೂಲೆ ಮೂಲೆಗೂ ಕೊಂಡೊಯ್ಯುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 
ಮಧ್ಯಪ್ರದೇಶದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿರುವ ಅಮಿತ್ ಷಾ, ಕೇಂದ್ರದಲ್ಲಿ ಬಹುಮತ ಪಡೆದು ಅಧಿಕಾರದಲ್ಲಿದ್ದು, 1,387 ಶಾಸಕರನ್ನು ಹೊಂದಿದ್ದರೂ ಪಕ್ಷ ಇನ್ನೂ ಬೆಳೆಯಬೇಕಿದೆ ಎಂದು ಪಕ್ಷದ ಕಾರ್ಯಕರ್ತರಲ್ಲಿ ಅಭಿಪ್ರಾಯವಿದೆ ಎಂದು ಹೇಳಿದ್ದಾರೆ. ನಾವು 5-10 ವರ್ಷ ಅಧಿಕಾರದಲ್ಲಿರಲು ಬಂದಿಲ್ಲ, ಕನಿಷ್ಠ 50 ವರ್ಷ ಅಧಿಕಾರ ನಡೆಸಲು ಬಂದಿದ್ದೇವೆ, ಅಧಿಕಾರದ ಮೂಲಕವಾಗಿ 40-50 ವರ್ಷಗಳಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ಜಾರಿಗೆ ತರಬೇಕೆಂಬ ಘೋಷಣೆಯೊಂದಿಗೆ ಮುನ್ನಡೆಯಬೇಕಿದ್ದು, ಬಿಜೆಪಿಯ ಧ್ವಜ ಇಲ್ಲದಿರುವ ಪ್ರದೇಶವೇ ಇಲ್ಲ ಎಂಬಂತೆ ಮಾಡಬೇಕು ಎಂದು ಷಾ ಕರೆ ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.