ರಕ್ಷಣಾ ಸಚಿವರಾಗಿ ಮನೋಹರ್ ಪರ್ರಿಕರ್ ವೈಫಲ್ಯ ಕಂಡಿದ್ದಾರೆ: ಶಿವಸೇನೆ
ದೇಶದ ರಕ್ಷಣಾ ಮಂತ್ರಿಯಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಸಂಪೂರ್ಣ...

Published On :
ನವದೆಹಲಿ: ದೇಶದ ರಕ್ಷಣಾ ಮಂತ್ರಿಯಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಸಂಪೂರ್ಣ ವಿಫಲವಾಗಿದ್ದರು ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಟೀಕಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಬ್ಬಿದ ವಿಡಿಯೊವೊಂದರ ಬಗ್ಗೆ ಅವರು ಈ ಹೇಳಿಕೆ ನೀಡಿದ್ದಾರೆ.
ವಿಡಿಯೋದಲ್ಲಿ ಮನೋಹರ್ ಪರ್ರಿಕರ್, ಮುಂಬರುವ ಗೋವಾ ವಿಧಾನಸಭೆ ಉಪ ಚುನಾವಣೆಯಲ್ಲಿ ಸೋತರೆ ಮತ್ತೆ ಕೇಂದ್ರ ಸರ್ಕಾರಕ್ಕೆ ರಕ್ಷಣಾ ಮಂತ್ರಿಯಾಗಿ ಹೋಗುತ್ತೇನೆ ಎಂದಿದ್ದರು. ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಾಜಿ ರಕ್ಷಣಾ ಸಚಿವರ ಹೇಳಿಕೆ ಬಗ್ಗೆ ಟೀಕಿಸಿದ ರಾವತ್, ಪಣಜಿಯಲ್ಲಿ ಉಪ ಚುನಾವಣೆ ನಡೆಯಲಿದೆ. ಮನೋಹರ್ ಪರ್ರಿಕರ್ ಸೋಲುವ ಭೀತಿ ಹೊಂದಿದ್ದಾರೆ. ಇದು ಪ್ರಜಾಪ್ರಭುತ್ವ. ಇಲ್ಲಿ ಜನ ಸ್ವೀಕರಿಸದಿದ್ದರೆ ಅಭ್ಯರ್ಥಿಗಳು ಸೋತು ಮನೆಗೆ ಹೋಗಬೇಕು. ಅಂತಹುದರಲ್ಲಿ ತಾವು ಮತ್ತೆ ಕೇಂದ್ರಕ್ಕೆ ಹೋಗಿ ರಕ್ಷಣಾ ಮಂತ್ರಿಯಾಗುವುದಾಗಿ ಹೇಳುತ್ತಾರೆ. ರಕ್ಷಣಾ ಸಚಿವಾಲಯವೆಂಬುದೇನು ಆಟದ ವಸ್ತುವೇ ಎಂದು ರಾವತ್ ಪ್ರಶ್ನಿಸಿದರು.ದೇಶದಲ್ಲಿ ಪ್ರಸ್ತುತ ಪೂರ್ಣಾವಧಿಯ ರಕ್ಷಣಾ ಸಚಿವರಿಲ್ಲದಿರುವುದು ದುರಂತ ಎಂದರು.
ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ, ಪ್ರಾಮಾಣಿಕ ಮತ್ತು ವಾಸ್ತವ ರಾಜಕಾರಣಿಯಾಗಿಲ್ಲ ಎಂದು ಮನೋಹರ್ ಪರ್ರಿಕರ್ ವಿಡಿಯೋ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಟೀಕಿಸಿದೆ.
ಗೋವಾ ಮುಖ್ಯಮಂತ್ರಿಯಾದ ನಂತರ ಮನೋಹರ್ ಪರ್ರಿಕರ್ ಮಾರ್ಚ್ 14ರಂದು ರಾಜಿನಾಮೆ ನೀಡಿದ್ದರು.
ಗೋವಾದ ಪಣಜಿ ಮತ್ತು ವಾಲ್ಪೊಯ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಇದೇ 23ರಂದು ನಡೆಯಲಿದೆ. ಪರ್ರಿಕರ್ ಕಾಂಗ್ರೆಸ್ ನ ಗಿರೀಶ್ ಚೊದಂಕರ್ ಮತ್ತು ಗೋವಾ ಸುರಕ್ಷ ಮಂಚ್ ನ ಆನಂದ್ ಶಿರೋಡ್ಕರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


