ಬಿಹಾರ: ಗೋಮಾಂಸ ಸೇವನೆ ಶಂಕೆ, 7 ಜನರ ಮೇಲೆ ಹಲ್ಲೆ
ಮನೆಯೊಂದರಲ್ಲಿ ಗೋಮಾಂಸ ಸೇವನೆ ಮಾಡಲಾಗುತ್ತಿದೆ ಎಂಬ ಶಂಕೆಯ ಮೇರೆಗೆ 7 ಜನರ ಮೇಲೆ ಗುಂಪೊಂದು ಥಳಿಸಿರುವ ಘಟನೆ ಬಿಹಾರ ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ...

Published On :
ಪಾಟ್ನ: ಮನೆಯೊಂದರಲ್ಲಿ ಗೋಮಾಂಸ ಸೇವನೆ ಮಾಡಲಾಗುತ್ತಿದೆ ಎಂಬ ಶಂಕೆಯ ಮೇರೆಗೆ 7 ಜನರ ಮೇಲೆ ಗುಂಪೊಂದು ಥಳಿಸಿರುವ ಘಟನೆ ಬಿಹಾರ ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಛನ್ಪಾಟಿಯಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ದುಮ್ರಾ ಗ್ರಾಮದಲ್ಲಿರುವ ಮೊಹಮ್ಮದ್ ಶಹಬುದ್ದೀನ್ ಎಂಬುವವರ ಮನೆಯೊಂದರಲ್ಲಿ ಗೋಮಾಂಸ ಸೇವನೆ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಗುಂಪೊಂದು ಗುರುವಾರ ರಾತ್ರಿ ಮೊಹಮ್ಮದ್ ಅವರ ಮನೆಯವರ ಮೇ್ಲೆ ದಾಳಿ ಮಾಡಿದ್ದಾರ. ದಾಳ ವೇಳೆ ಭಾರತ್ ಮಾತಾ ಕಿ ಜ ಎಂದು ಘೋಷಣೆ ಕೂಗಿದ್ದಾರೆ.
ದಾಳಿ ವೇಳೆ ಶಹಬುದ್ದೀನ್ ನನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಶಹಬುದ್ದೀನ್ ಗೋಮಾಂಸ ಸಂಗ್ರಹ ಮಾಡಿರುವುದು ತಿಳಿದುಬಂದಿದೆ. ಕೂಡಲೇ ಗುಂಪು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದೆ.
ಬುಧವಾರ ರಾತ್ರಿ ಹಸುವೊಂದನ್ನು ಹತ್ಯೆ ಮಾಡಿದ ಬಳಿಕ ಶಹಬುದ್ದೀನ್ ಹಾಗೂ ನೆರೆಮನೆಯವರು ಗುರುವಾರ ಬೆಳಿಗ್ಗೆ ಗೋಮಾಂಸ ಸೇವನೆ ಮಾಡುತ್ತಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ವಿಶ್ವ ಹಿಂದೂ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು 50 ಮಂದಿಯಿಂದ ಗುಂಪೊಂದು ಶಹಬುದ್ದೀನ್ ಮನೆಯ ಮೇಲೆ ದಾಳಿ ನಡೆಸಿದೆ.
ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ದಾಳಿಯನ್ನು ನಿಲ್ಲಿಸಿದ್ದರು. ದಾಳಿಯಲ್ಲಿ ಗಾಯಗೊಂಡಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಪ್ರಕರಣ ಸಂಬಂಧ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಮಂದಿಯನ್ನು ಬಂಧನಕ್ಕೊಳಪಡಿಸಿ ಎಫ್ಐಆರ್ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


