ದೇಶ

ಪಾಕ್, ಚೀನಾ ಎದುರಿಸಬಹುದು ಆದರೆ ಭಾರತಕ್ಕೆ ಬೆದರಿಕೆ ಇರುವುದು ಒಳಗಿನಿಂದಲೇ: ಫಾರೂಕ್ ಅಬ್ದುಲ್ಲಾ

ದೇಶವು ಚೀನಾ ಹಾಗೂ ಪಾಕಿಸ್ತಾನದ ವಿರುದ್ದ ಹೋರಾಟ ನಡೆಸಲು ಸಿದ್ದವಿದೆ ಆದರೆ ದೇಶದ ಒಳಗಿರುವವರೇ ಕೆಲವರು ಎಲ್ಲವನ್ನೂ ಹಾಳುಗೆಡವಲು ಸಿದ್ದರಾಗಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ಇಂದು ಯಾರೊಬ್ಬರನ್ನೂ ಹೆಸರಿಸದೆ ಹೇಳಿದರು.

ಪಾಕ್, ಚೀನಾ ಎದುರಿಸಬಹುದು ಆದರೆ ಭಾರತಕ್ಕೆ ಬೆದರಿಕೆ ಇರುವುದು ಒಳಗಿನಿಂದಲೇ: ಫಾರೂಕ್ ಅಬ್ದುಲ್ಲಾ
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ
Published On :
ಹೊಸದಿಲ್ಲಿ: ದೇಶವು ಚೀನಾ ಹಾಗೂ ಪಾಕಿಸ್ತಾನದ ವಿರುದ್ದ ಹೋರಾಟ ನಡೆಸಲು ಸಿದ್ದವಿದೆ ಆದರೆ ದೇಶದ ಒಳಗಿರುವವರೇ ಕೆಲವರು ಎಲ್ಲವನ್ನೂ ಹಾಳುಗೆಡವಲು ಸಿದ್ದರಾಗಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಇಂದು ಯಾರೊಬ್ಬರನ್ನೂ ಹೆಸರಿಸದೆ ಹೇಳಿದರು.
ಜೆಡಿ(ಯು) ಬಂಡಾಯ ನಾಯಕ ಶರದ್ ಯಾದವ್ ಆಯೋಜಿಸಿದ್ದ 'ಸಂಜೀ ವಿರಾಸತ್ ಬಚಾವೊ' (ನಮ್ಮ ಸಮ್ಮಿಶ್ರ ಸಂಸ್ಕೃತಿಯನ್ನು ಉಳಿಸಿ) ಸಭೆಯಲ್ಲಿ ಮಾತನಾಡಿದ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಕಣಿವೆಯಲ್ಲಿ ಪರಿಸ್ಥಿತಿ ಕುರಿತು ವಿವರಿಸಿದರು.
"ಭಾರತ ಚೀನಾ ಮತ್ತು ಪಾಕಿಸ್ತಾನ ಎದುರಿಸಬಹುದು ಆದರೆ ದುರದೃಷ್ಟವಶಾತ್ ಇಂದು ನಮಗೆ ಬೆದರಿಕೆಯು ಒಅಳಗಡೆಯಿಂದಲೇ ಬರುತ್ತಿದೆ ಹೊರತು ಹೊರಗಿನಿಂದಲ್ಲ.
"ಆಂದರ್ ಕೊಯಿ ಚೋರ್ ಬೈಥಾ ಹುವಾ ಹೈ ಜೋ ಹಮರಾ ಬೆಡ ಗರಕ್ ಕರ್ ರಾಹಾ ಹೈ (ಎಲ್ಲವನ್ನೂ ಲೂಟಿ ಮಾಡಲು ನಿರ್ಧರಿಸಿರುವ ಒಬ್ಬ ಕಳ್ಳನು ಒಳಗಡೆ ಕುಳಿತಿದ್ದಾನೆ)," ಅಬ್ದುಲ್ಲಾ ಕೇಂದ್ರ ಸರ್ಕಾರದ ವಿರುದ್ದ ಪರೋಕ್ಷವಾಗಿ ಹೀಗೆ ಕಿಒಡಿ ಕಾರಿದರು. 
ಕಾಶ್ಮೀರ ಮತ್ತು ಕಾಶ್ಮೀರಿಗಳ ಬಗ್ಗೆ ಮಾತನಾಡುತ್ತಾ, ಕೆಲವರು ತಮ್ಮ ರಾಷ್ಟ್ರೀಯತೆಯನ್ನು ಪ್ರಶ್ನಿಸಲು ಪ್ರಯತ್ನಿಸುತ್ತಿದ್ದಾರೆ ಎಂದ ಅವರು "ನಮ್ಮ ರಾಷ್ಟ್ರೀಯತೆಯ ಬಗ್ಗೆ ಕೇಳಲು ನೀವು ಯಾರು? ನಾವು ವಿಭಜನೆಯ ಸಮಯದಲ್ಲಿ ಪಾಕಿಸ್ತಾನದ ಮೇಲೆ ಭಾರತವನ್ನು ಆಯ್ಕೆ ಮಾಡಿದ್ದೇವೆ, ಏಕೆಂದರೆ ಭಾರತವು ಸಮಾನತೆಯನ್ನು ಖಾತರಿಪಡಿಸುತ್ತದೆ ಮತ್ತು ನಾನು ಭಾರತೀಯ ಮುಸ್ಲಿಂ ಎಂದು ಹೆಮ್ಮೆಪಡುತ್ತೇನೆ" ಎಂದು ಅವರು ಹೇಳಿದರು.
ಅವರು ಏಕತೆ ಬಗ್ಗೆ ಮಾತನಾಡುತ್ತಿದ್ದಾರೆ ಆದರೆ ಅವರು ಅಂತಹಾ ವಾತಾವರಣ್ ನಿರ್ಮಿಸಿದ್ದಾರೆಯೆ? ಅವರು ಸಾಕಷ್ಟು ಮಾತನಾಡುತ್ತಾರೆ ಆದರೆ ಕೆಲಸಗಳಾಗುತ್ತಿಲ್ಲ."
 ಎಂದರು. 
ಕಣಿವೆಯಲ್ಲಿನ ಸಮಸ್ಯೆಗಳಿಗೆ ಶಾಂತಿಯುತ ನಿರ್ಣಯಗಳಿಂದ  ಪರಿಹಾರವಿದೆ ಎಂದು ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ ದಿನದ ಭಾಷಣದಲ್ಲಿ ಹೇಳಿದ್ದರು. ಕಾಶ್ಮೀರ ಸಮಸ್ಯೆಯು ಬುಲೆಟ್ ಹಾಗೂ ನಿಂದನೆಗಳಿಂದ ಬಗೆಹರಿಯುವುದಿಲ್ಲ. ಬದಲಾಗಿ ಎಲ್ಲಾ ಕಾಶ್ಮೀರಿಗಳನ್ನು ಹೊಂದಿಸಿಕೊಂಡು ಹೋಗುವುದು ಉತ್ತಮ ಮಾರ್ಗ ಎನ್ನುವುದು ಮೋದಿ ನಿಲುವಾಗಿತ್ತು. 
"ನಾವು ನಿಷ್ಠಾವಂತರಾಗಿದ್ದೇವೆ, ಆದರೆ ಅವರು ವಿಶಾಲ ಹೃದಯದವರಾಗಿಲ್ಲ ಎಂದು ಅಬ್ದುಲ್ಲಾ ನೋವಿನಿಂದ ಹೇಳಿದರು.
ಕಾಶ್ಮೀರ ಪರಿಸ್ಥಿತಿಯನ್ನು ತಿಳಿಯಲು ಸರ್ವ ಪಕ್ಷಗಳ ಸದಸ್ಯರನ್ನೊಳಗೊಂಡ ನಿಯೋಗವು ಕಾಶ್ಮೀರಕ್ಕೆ ಭೇಟಿ ನೀಡಿತ್ತು. ಅದು ತನ್ನ ವರದಿಯನ್ನು ಕೇಂದ್ರಕ್ಕೆ ತಲುಪಿಸಿದರೂ ಕೇಂದ್ರ ಸೂಕ್ತ ಕ್ರಮ ಕೈಗೊಳ್ಲಲಿಲ್ಲ ಎಂದು ಅವರು ವಿಷಾದ ವ್ಯಕ್ತ ಪಡಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.