ಕಾಶ್ಮೀರ ಕುರಿತು ಪ್ರಧಾನಿ ಮೋದಿ ಹೇಳಿಕೆ; ಶಿವಸೇನೆ ಖಂಡನೆ
71ನೇ ಸ್ವಾತಂತ್ರ್ಯೋತ್ಸವ ದಿನದಂದು ಕಾಶ್ಮೀರ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ ಹೇಳಿಕೆಗೆ ಶಿವಸೇನೆ ಬುಧವಾರ ತೀವ್ರವಾಗಿ ಕಿಡಿಕಾರಿದೆ...

Published On :
ನವದೆಹಲಿ: 71ನೇ ಸ್ವಾತಂತ್ರ್ಯೋತ್ಸವ ದಿನದಂದು ಕಾಶ್ಮೀರ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ ಹೇಳಿಕೆಗೆ ಶಿವಸೇನೆ ಬುಧವಾರ ತೀವ್ರವಾಗಿ ಕಿಡಿಕಾರಿದೆ.
ಮೋದಿಯವರ ಹೇಳಿಕೆ ಕುರಿತಂತೆ ತನ್ನ ಮುಖ ಪುಟ ಸಾಮ್ನಾದ ಸಂಪಾದಕೀಯದಲ್ಲಿ ಬರೆದುಕೊಂಡಿರುವ ಶಿವಸೇನೆ, ಗುಂಡು ಹಾಗೂ ಬುಲೆಟ್ ಗಳಿಂದಲ್ಲ, ಪರಸ್ಪರ ಅಪ್ಪುಗೆಯೊಂದೇ ಸಾಕು ಪ್ರತ್ಯೇಕತೆ ದೂರಾಗುತ್ತದೆ ಎಂದು ಮೋದಿಯವರು ಹೇಳಿದ್ದರು. ಈ ಆಲೋಚನೆಗಳನ್ನು ಕಾರ್ಯಗತಗೊಳಿಸಬೇಕಾದರೆ, ನಾವು ನಮ್ಮ ಭಾರತೀಯ ಸಂವಿಧಾನದಿಂದ 370ನೇ ವಿಧಿಯನ್ನು ತೆಗೆದುಹಾಕುವ ಅಗತ್ಯವಿದೆ ಎಂದು ವ್ಯಂಗ್ಯವಾಡಿದೆ.
ಎಲ್ಲಾ ಕಾಶ್ಮೀರಿಗರನ್ನು ಅಪ್ಪಿಕೊಳ್ಳುವ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬಹುದು. ಇದು ನಿಜಕ್ಕೂ ಉತ್ತಮವಾದ ಕಲ್ಪನೆ ಮತ್ತು ಈ ಆಲೋಚನೆ ಹಾಗೂ ಕಲ್ಪನೆಯನ್ನು ಕಾರ್ಯಗತಗೊಳಿಸಬೇಕಾದರೆ, ದಯವಿಟ್ಟು ಭಾರತೀಯ ಸಂವಿಧಾನದಿಂದ 370ನೇ ವಿಧಿಯನ್ನು ತೆಗೆದುರಾಗಿ. ಇದರಿಂತ ಪ್ರತೀಯೊಬ್ಬರೂ ಕಾಶ್ಮೀರಕ್ಕೆ ಭೇಟಿ ನೀಡಲು ಅವಕಾಶ ನೀಡಿದಂತಾಗುತ್ತದೆ. ನಂತರ ಅವರು ಕಾಶ್ಮೀರಿಗರನ್ನು ಅಪ್ಪಿಕೊಳ್ಳಬಹುದು.
ನಂಬಿಕೆ ಹೆಸರಿನಲ್ಲಿ ದೇಶದಲ್ಲಿ ಒಂದೇ ವೇಳೆ ಹಿಂಸಾಚಾರ ಸೃಷ್ಟಿಯಾಗಿದ್ದೇ ಆದರೆ, ಮುಸ್ಲಿಮರೂ ಮಾತ್ರವಲ್ಲ, ಹಿಂದೂಗಳಿಗೂ ಕೂಡ ಅಭದ್ರತೆ ಎದುರಾಗುತ್ತದೆ ಎಂದು ಹೇಳಿಕೊಂಡಿದೆ.
ಇದೇ ವೇಳೆ ಮೋದಿಯವರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಶಿವಸೇನೆ, ಸರಕು ಮತ್ತು ಸೇವಾ ತೆರಿಗೆ ಮತ್ತು ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ್ದಾಗ ಪ್ರಧಾನಂತ್ರಿ ನರೇಂದ್ರ ಮೋದಿಯವರು ಕಠಿಣ ನಿಲುವನ್ನು ತೆಗೆದುಕೊಂಡಿದ್ದರು. ಇದೀಗ ನಮ್ಮ ದೇಶದ ಜನತೆಯೇ ವಂದೇ ಮಾತರಂ ಗೀತೆ ಹಾಡಲು ನಿರಾಕರಿಸುತ್ತಿದ್ದಾರೆ, ನೋಟು ನಿಷೇಧ, ಜಿಎಸ್'ಟಿ ಜಾರಿಗೆ ತರುವಾಗ ಕಠಿಣವಾಗಿದ್ದ ಮೋದಿಯವರು ಈಗಾಗಲೇ ಕಠಿಣ ನಿಲುವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


