ಆಕರ್ಷಕ ಡೂಡಲ್ ಮೂಲಕ 71ನೇ ಸ್ವಾತಂತ್ರ್ಯ ದಿನೋತ್ಸವ ಆಚರಿಸಿದ ಗೂಗಲ್
ಇಡೀ ರಾಷ್ಟ್ರವೇ ಇಂದು 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದು, ಖ್ಯಾತ ಸರ್ಚ್ ಎಂಜಿನ್ ಗೂಗಲ್ ಕೂಡ ಆಕರ್ಷಕ ಮತ್ತು ವಿಭಿನ್ನ ಡೂಡಲ್ ಬಿಡಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಅಚರಿಸಿದೆ.

ನವದೆಹಲಿ: ಇಡೀ ರಾಷ್ಟ್ರವೇ ಇಂದು 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದು, ಖ್ಯಾತ ಸರ್ಚ್ ಎಂಜಿನ್ ಗೂಗಲ್ ಕೂಡ ಆಕರ್ಷಕ ಮತ್ತು ವಿಭಿನ್ನ ಡೂಡಲ್ ಬಿಡಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಅಚರಿಸಿದೆ.
ತೈಲವರ್ಣದಲ್ಲಿ ಚಿತ್ರಿಸಿದ ಸಂಸತ್ ಭವನದ ಮುಂಭಾಗದಲ್ಲಿ ರಾಷ್ಟ್ರಧ್ವಜವನ್ನು ನೆನಪಿಸುವ ಅಶೋಕತ ಚಕ್ರ ಹಾಗೂ ಅದರ ಅಕ್ಕಪಕ್ಕದಲ್ಲಿ ನವಿಲುಗಳನ್ನು ಆಕರ್ಷಕವಾಗಿ ಚಿತ್ರಿಸಲಾಗಿದೆ. ಈ ತೈಲವರ್ಣದ ಚಿತ್ರವನ್ನು ಗೂಗಲ್ ತನ್ನ ಮುಖಪುಟದಲ್ಲಿ ಹಾಕುವ ಮೂಲಕ ಭಾರತ ಪ್ರಜೆಗಳಿಗೆ 71ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದೆ.
ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ತನ್ನ ವಿಶೇಷ ಡೂಡಲ್ ಗಳ ಮೂಲಕ ದೇಶದ ಗಮನ ಸೆಳೆದಿದ್ದ ಗೂಗಲ್, ಈ ಹಿಂದೆ ಡಾ.ರಾಜ್ ಕುಮಾರ್ ಅವರ ಭಾವ ಚಿತ್ರವನ್ನು ಅವರ ಜನ್ಮ ದಿನಾಚರಣೆ ವೇಳೆ ತನ್ನ ಮುಖಪುಟದಲ್ಲಿ ಹಾಕುವ ಮೂಲಕ ಕನ್ನಡಿಗರ ಮನ ಸೆಳೆದಿತ್ತು. ಇದೀಗ ಸ್ವಾತಂತ್ರ್ಯೋತ್ಸವದ ವಿಶೇಷ ಚಿತ್ರವನ್ನು ಮುಖಪುದಲ್ಲಿ ಹಾಕಿ ಶುಭ ಕೋರಿದೆ.
ಮುಂಬೈ ಮೂಲದ ಕಲಾವಿದನಿಂದ ತಯಾರಾದ ಚಿತ್ರ
ಇನ್ನು ಇಂದಿನ ವಿಶೇಷ ಡೂಡಲ್ ಅನ್ನು ಮುಂಬೈ ಮೂಲಕ ಕಲಾವಿದರಾದ ಸಬೀನಾ ಕಾರ್ನಿಕ್ ಅವರು ಚಿತ್ರಿಸಿದ್ದು, ಸಬೀನಾ ಕಾರ್ನಿಕ್ ತಮ್ಮ ಪೇಪರ್ ಕಲೆಗಳಿಂದ ಖ್ಯಾತಿ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


