ದೇಶ

'ವಂದೇ ಮಾತರಂ' ಕಡ್ಡಾಯಗೊಳಿಸಲು ಕಾನೂನು ಜಾರಿಗೆ ತನ್ನಿ: ಉದ್ಧವ್ ಠಾಕ್ರೆ

ರಾಷ್ಟ್ರೀಯ ಹಾಡು ವಂದೇ ಮಾತರಂ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು 'ವಂದೇ ಮಾತರಂ' ಕಡ್ಡಾಯಗೊಳಿಸಲು ಕಾನೂನೊಂದನ್ನು ಜಾರಿಗೆ ತರಬೇಕೆಂದು ಮಂಗಳವಾರ...

'ವಂದೇ ಮಾತರಂ' ಕಡ್ಡಾಯಗೊಳಿಸಲು ಕಾನೂನು ಜಾರಿಗೆ ತನ್ನಿ: ಉದ್ಧವ್ ಠಾಕ್ರೆ
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
Published On :
ಮುಂಬೈ: ರಾಷ್ಟ್ರೀಯ ಹಾಡು ವಂದೇ ಮಾತರಂ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು 'ವಂದೇ ಮಾತರಂ' ಕಡ್ಡಾಯಗೊಳಿಸಲು ಕಾನೂನೊಂದನ್ನು ಜಾರಿಗೆ ತರಬೇಕೆಂದು ಮಂಗಳವಾರ ಹೇಳಿದ್ದಾರೆ. 
ಮರಾಠಿ ವ್ಯಂಗ್ಯಚಿತ್ರಗಳ ಪತ್ರಿಕೆಯಾಗಿ ಖ್ಯಾತಿಗಳಿಸಿದ್ದ 'ಮಾರ್ಮಿಕ್' ಪತ್ರಿಕೆಯ 57ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ರಾಷ್ಟ್ರೀಯತೆ ಎಂಬುದು ಕೇವಲ ಜನವರಿ 26 ಮತ್ತು ಆಗಸ್ಟ್ 15ರ ಸಂಭ್ರಮಕ್ಕೆ ಮಾತ್ರವೇ ಸೀಮಿತವಾಗಿರಬಾರದು. ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಹೀಗಾಗಿ 'ವಂದೇ ಮಾತರಂ'ನ್ನು ಕಡ್ಡಾಯಗೊಳಿಸಲು ಕಾನೂನನ್ನು ಜಾರಿಗೆ ತರಬೇಕೆಂದು ಹೇಳಿದ್ದಾರೆ. 
ವಂದೇ ಮಾತರಂ ಮಾಡುವುದರಲ್ಲಿ ತಪ್ಪೇನಿದೆ. ಕೇವಲ ನಿಗದಿತ ಹಾಗೂ ಆಯ್ಕೆ ಮಾಡಿದ ದಿನಗಳಲ್ಲಿ ಮಾತ್ರವೇ ಏಕೆ ಹಾಡಬೇಕು? ವಂದೇ ಮಾತರಂನ್ನು ಪ್ರತಿನಿತ್ಯ ಹಾಡಬೇಕು. ಇದಕ್ಕಾಗಿ ಸರ್ಕಾರ ಕಾನೂನನನ್ನು ಜಾರಿಗೆ ತರಬೇಕು ಎಂದು ತಿಳಿಸಿದ್ದಾರೆ. 
ಅಧಿಕಾರಕ್ಕೆ ಬರುವುದಕ್ಕೂ ಮುನ್ನ ದೇಶದಲ್ಲಿರಬೇಕೆಂದರೆ ವಂದೇ ಮಾತರಂನ್ನು ಪ್ರತೀಯೊಬ್ಬರೂ ಹಾಡಬೇಕೆಂದು ಬಿಜೆಪಿಯವರು ಹೇಳುತ್ತಿದ್ದರು. ಇದೀಗ ಅವರಿಗೆ ಏನಾಗಿದೆ? ರಾಷ್ಟ್ರಗೀತೆ ಹಾಡುವುದನ್ನು ಒಬ್ಬ ವ್ಯಕ್ತಿ ನಿರ್ಧಾರ ಮಾಡುತ್ತಾನೆಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.