ದೇಶ

ಜಮ್ಮುಕಾಶ್ಮೀರದ ಬದ್ಗಾಮ್ ನಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: ನಾಲ್ವರು ಯೋಧರಿಗೆ ಗಾಯ

ಅಪರಿಚಿತ ಉಗ್ರರ ಗುಂಪೊಂದು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ನಾಲ್ವರು ಯೋಧರು ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ...

ಜಮ್ಮುಕಾಶ್ಮೀರದ ಬದ್ಗಾಮ್ ನಲ್ಲಿ ಉಗ್ರರಿಂದ ಗ್ರೆನೇಡ್  ದಾಳಿ: ನಾಲ್ವರು ಯೋಧರಿಗೆ ಗಾಯ
ಸಾಂದರ್ಭಿಕ ಚಿತ್ರ
Published On :
ಜಮ್ಮು: ಅಪರಿಚಿತ ಉಗ್ರರ ಗುಂಪೊಂದು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ನಾಲ್ವರು ಯೋಧರು ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.ದಾಳಿಯಲ್ಲಿ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. 
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಯಾಸೀನ್ ಐಟೂ ನನ್ನು ಸೇನಾ ಪಡೆ ಕಾಶ್ಮೀರದ ಸೋಪಿಯಾನ್ ನಲ್ಲಿ ಎನ್ ಕೌಂಟರ್ ನಡೆಸಿ ಹತ್ಯೆಗೈದ ನಂತರ ಗ್ರೆನೇಡ್ ದಾಳಿ ಪ್ರಮಾಣ ಹೆಚ್ಚಿದೆ. 
ಗಾಯಗೊಂಡ ಸಿಆರ್ ಪಿಎಫ್ ಪಡೆ ಯೋಧರನ್ನು ಎಸ್ ಕೆ ಐಎಮ್ ಎಸ್  ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. 
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸ್ವ-ಶೈಲಿಯ ಆಪರೇಷನ್ ಕಮಾಂಡರ್ ಯಾಸಿನ್ ಐಟೂ ಅಲಿಯಾಸ್ ಗಝ್ನವಿ ಸೇರಿದಂತೆ ಮೂವರು ಉಗ್ರರನ್ನು ಭಾನುವಾರ ಎನ್ ಕೌಂಟರ್ ಮಾಡಲಾಗಿತ್ತು
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಆರಂಭವಾಗಿದ್ದ ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದು, ಇಬ್ಬರು ಯೋಧರು ಸಹ ಹುತಾತ್ಮರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.