ದೇಶ

ಸಿದ್ದರಾಮಯ್ಯ ವಿರುದ್ದ ಅಮಿತ್ ಶಾ ಗುಡುಗು: ಭ್ರಷ್ಟ, ನಾಚಿಕೆಗೇಡಿ ಸರ್ಕಾರವನ್ನು ಬುಡಸಮೇತ ಕಿತ್ತೆಸೆಯುವಂತೆ ಕರೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗೆಲವು ಸಾಧಿಸುವ ಸಂಕಲ್ಪದೊಂದಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದು, ಭ್ರಷ್ಟ ಹಾಗೂ ನಾಚಿಕೆಗೇಡಿನ ಸರ್ಕಾರವನ್ನು...

ಸಿದ್ದರಾಮಯ್ಯ ವಿರುದ್ದ ಅಮಿತ್ ಶಾ ಗುಡುಗು: ಭ್ರಷ್ಟ, ನಾಚಿಕೆಗೇಡಿ ಸರ್ಕಾರವನ್ನು ಬುಡಸಮೇತ ಕಿತ್ತೆಸೆಯುವಂತೆ ಕರೆ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
Published On :
ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗೆಲವು ಸಾಧಿಸುವ ಸಂಕಲ್ಪದೊಂದಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದು, ಭ್ರಷ್ಟ ಹಾಗೂ ನಾಚಿಕೆಗೇಡಿನ ಸರ್ಕಾರವನ್ನು ಬುಡಸಮೇತ ಕಿತ್ತುಹಾಕುವಂತೆ ಕರೆ ನೀಡಿದ್ದಾರೆ. 
ಮೂರು ದಿನಗಳ ಭೇಟಿಗಾಗಿ ನಿನ್ನೆಯಷ್ಟೇ ಬೆಂಗಳೂರಿಗೆ ಆಗಮಿಸಿದ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಟೋಲ್ ಪ್ಲಾಜಾ ಬಳಿ ಮತ್ತು ಮಲ್ಲೇಶ್ವರದಲ್ಲಿನ ಪಕ್ಷದ ಕಚೇರಿ ಬಳಿ ತಮ್ಮನ್ನು ಸ್ವಾಗತಿಸಲು ನೆರೆದಿದ್ದ ಸಹಸ್ರಾರು ಕಾರ್ಯಕರ್ತರನ್ನುದ್ದೇಶಿಸಿ ಚುಟುಕಾಗಿ ಮಾತನಾಡಿದರು. 
ರಾಜ್ಯದಲ್ಲಿನ ಕಾಂಗ್ರೆಸ್ ನೇತೃತ್ವದ ಭ್ರಷ್ಟ ಸರ್ಕಾರವನ್ನು ಬುಡಸಮೇತ ಕಿತ್ತೆಸೆಯಬೇಕು. ಅಲ್ಲಿಯವರೆಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ವಿರಮಿಸುವಂತಿಲ್ಲ ಎಂದು ಹೇಳಿದ್ದಾರೆ. 
ಭಷ್ಟ್ರರ ವಿರುದ್ಧ ಹಲವು ಬಾರಿ ದಾಳಿ ಮಾಡಿ, ಬಂಧನಕ್ಕೊಳಪಡಿಸಿದ್ದರೂ ಕಾಂಗ್ರೆಸ್ ಮಾತ್ರ ಅಂತಹವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ತಮ್ಮ ಸರ್ಕಾರದ ವೈಫಲ್ಯಗಳು ಎಲ್ಲಿ ಬಹಿರಂಗೊಳ್ಳುತ್ತವೆಯೇ ಎಂಬ ಭಯದಲ್ಲಿ ಕ್ರಮ ಕೈಗೊಂಡಿಲ್ಲ. ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಲೇ ಬಂದಿದೆ. 
ಕೇಂದ್ರ ನರೇಂದ್ರ ಮೋದಿ ಸರ್ಕಾರ 106 ಕೇಂದ್ರೀಯ ಯೋಜನೆಗಳನ್ನು ಜಾರಿಗೆ ಬಂದಿದೆ. ಇದೀಗ ಈ ಯೋಜನೆಗಳು ಜನರಿಗೆ ಲಾಭವನ್ನು ನೀಡುತ್ತಿದೆ. ಆದರೆ, ಕರ್ನಾಟಕದ ಜನರಿಗೆ ಅದರ ಫಲಾನುಭವ ಸಿಗುತ್ತಿಲ್ಲ. ಕಾರಣ ಇಲ್ಲೊಂದು ಭ್ರಷ್ಟ ಹಾಗೂ ನಾಚಿಕೆಗೇಡಿನ ಸರ್ಕಾರವಿದೆ. ಎಷ್ಟು ನಾಚಿಕೆ ಗೇಡು ಎಂದರೆ, ಇಲ್ಲಿನ ಸಚಿವರೊಬ್ಬರ ಮನೆಯ ಮೇಲೆ ದಾಳಿಯಾಗಿ ದೊಡ್ಡ ಸುದ್ದಿಯಾದರೂ, ರಾಜೀನಾಮೆ ಪಡೆಯದಷ್ಟು ನಾಚಿಕೆಗೇಡಿನ ಸರ್ಕಾರವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 
13ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 5 ವರ್ಷದಲ್ಲಿ ರೂ. 61,691 ಕೋಟಿ ನೀಡಿದೆ. 14ನೇ ವೇತನ ಆಯೋಗಜ ಎನ್ ಡಿಎ ಸರ್ಕಾರ ಅವಧಿಯಲ್ಲಿ ರೂ. 1,86,925 ಕೋಟಿ ಅನುದಾನ ನೀಡಲಾಗಿದೆ. ಹಾಗೆಯೇ ವಿವಿಧ ಯೋಜನೆಯಡಿಯಲ್ಲಿ ಒಟ್ಟಾರೆಯಾಗಿ ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ 88,583 ಕೋಟಿ ಅನುದಾನ ಹಾಗೂ ನಮ್ಮ ಸರ್ಕಾರದಿಂದ 3 ವರ್ಷದಲ್ಲಿ 2,19,506 ಕೋಟಿ ನೀಡಿಲಾಗಿದೆ. ಅಂದರೆ, ಕೇಂದ್ರ ಅನುದಾನದ ಪ್ರಮಾಣದಲ್ಲಿ ಎರಡೂವರೆ ಪಟ್ಟು ಹೆಚ್ಚಾಗಿದೆ. ಆ ಹಣ ಎಲ್ಲಿ ಹೋಯಿತು ಎಂಬುದು ತಿಳಿಯುತ್ತಿಲ್ಲ. 
ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಲೆಕ್ಕ ನೀಡಬೇಕು. ಇಲ್ಲಿನ ಜನರು ಮೂಕ ಪ್ರೇಕ್ಷಕರಾಗಿ ಕೂರಬಾರದು. ನೀವು ಕೇಳಲಿಲ್ಲ ಎಂದರೆ, ನಾನೇ ಬಂದು ಕೇಳುತ್ತೇನೆ. ನಾನು ಬಿಡುವವರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.