ಡೋಕ್ಲಾಮ್ ಬಿಕ್ಕಟ್ಟಿನಿಂದ ಭಾರತ-ಚೀನಾ ನಡುವೆ ಯುದ್ಧವಾಗುವುದಿಲ್ಲ: ದಲೈ ಲಾಮ
ಡೊಕ್ಲಾಮ್ ಬಿಕ್ಕಟ್ಟಿನಿಂದ ಭಾರತ-ಚೀನಾ ನಡುವೆ ಯುದ್ಧ ಉಂಟಾಗುವುದಿಲ್ಲ ಎಂದು ಬೌದ್ಧ ಧರ್ಮ ಗುರು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ. ಚೀನಾ ಯುದ್ಧೋನ್ಮಾದದಲ್ಲಿ ಮಾತನಾಡುತ್ತಿದ್ದೆ.

Published On :
ನವದೆಹಲಿ: ಡೊಕ್ಲಾಮ್ ಬಿಕ್ಕಟ್ಟಿನಿಂದ ಭಾರತ-ಚೀನಾ ನಡುವೆ ಯುದ್ಧ ಉಂಟಾಗುವುದಿಲ್ಲ ಎಂದು ಬೌದ್ಧ ಧರ್ಮ ಗುರು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ. ಚೀನಾ ಯುದ್ಧೋನ್ಮಾದದಲ್ಲಿ ಮಾತನಾಡುತ್ತಿದ್ದೆ. ಆದರೆ ಅದು ತಾತ್ಕಾಲಿಕವಷ್ಟೇ ಎಂದು ದಲೈ ಲಾಮ ಹೇಳಿದ್ದಾರೆ.
ಚೀನಾ-ಭಾರತ ನೆರೆ ರಾಷ್ಟ್ರಗಳಾಗಿರುವುದರಿಂದ ಶಾಂತಿ ಹಾಗೂ ಸಹಬಾಳ್ವೆ ನಡೆಸುವುದು ಅಗತ್ಯವಾಗಿದೆ. ಡೊಕ್ಲಾಮ್ ಬಿಕ್ಕಟ್ಟು ತೀರಾ ಗಂಭೀರ ಸಮಸ್ಯೆ ಎಂದೆನಿಸುತ್ತಿಲ್ಲ, 1962 ರಲ್ಲಿ ಚೀನಾ ಕೊನೆಗೆ ತನ್ನ ಪಡೆಗಳನ್ನು ಹಿಂಪಡೆಯಲು ಒಪ್ಪಿತ್ತು, ಈಗಲೂ ಹಿಂದಿ-ಚೀನಿ ಭಾಯಿ ಭಾಯಿ ಒಂದೇ ಭಾರತ-ಚೀನಾ ನಡುವಿನ ಬಿಕ್ಕಟ್ಟನ್ನು ಹೋಗಲಾಡಿಸಲು ಇರುವ ಮಾರ್ಗ ಎಂದು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ.
ಶಾಂತಿ, ಸೌಹಾರ್ದತೆಯನ್ನು ಮುಂದುವರೆಸಲು ಇರುವ ಪರಿಹಾರವೆಂದರೆ ಮಾತುಕತೆಯೊಂದೇ. ಒಬ್ಬರಿಗೆ ಗೆಲುವು ಒಬ್ಬರಿಗೆ ಸೋಲು ಎಂಬುದು ಹಳೆಯ ಚಿಂತನೆ, ನಿಮ್ಮ ನೆರೆಯವರ ವಿನಾಶವೆಂದರೆ ಅದು ನಿಮ್ಮ ನಾಶವೂ ಆಗಿರುತ್ತದೆ ಎಂದು ದಲೈ ಲಾಮ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


