ದೇಶ

ಕಾಂಗ್ರೆಸ್ ಗೆ ಅಸ್ತಿತ್ವದ ಪ್ರಶ್ನೆ, ಬಿಜೆಪಿಗೆ ಪ್ರತಿಷ್ಟೆಯ ಕಣ: ಗುಜರಾತ್ ರಾಜ್ಯಸಭೆ ಚುನಾವಣೆ ಮತದಾನ ಆರಂಭ

ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ರಾಜ್ಯಸಭೆ ಚುನಾವಣೆಗಾಗಿ ಮತದಾನ ಆರಂಭವಾಗಿದ್ದು, ಗುಜರಾತ್ ಎಲ್ಲ ಜನಪ್ರತಿನಿಧಿಗಳು ಮೂರು ಸ್ಥಾನಗಳಿಗಾಗಿ ಮತದಾನ ಮಾಡುತ್ತಿದ್ದಾರೆ.

ಕಾಂಗ್ರೆಸ್ ಗೆ ಅಸ್ತಿತ್ವದ ಪ್ರಶ್ನೆ, ಬಿಜೆಪಿಗೆ ಪ್ರತಿಷ್ಟೆಯ ಕಣ: ಗುಜರಾತ್ ರಾಜ್ಯಸಭೆ ಚುನಾವಣೆ ಮತದಾನ ಆರಂಭ
ಗುಜರಾತ್ ವಿಧಾನಸಭೆ
Published On :

ಅಹ್ಮದಾಬಾದ್: ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ರಾಜ್ಯಸಭೆ ಚುನಾವಣೆಗಾಗಿ ಮತದಾನ ಆರಂಭವಾಗಿದ್ದು, ಗುಜರಾತ್ ಎಲ್ಲ ಜನಪ್ರತಿನಿಧಿಗಳು ಮೂರು ಸ್ಥಾನಗಳಿಗಾಗಿ ಮತದಾನ ಮಾಡುತ್ತಿದ್ದಾರೆ.

ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಶಾಸಕರು ಈಗಾಗಲೇ ಗುಜರಾತ್ ವಿಧಾನಸಭೆ ತಲುಪಿದ್ದು, ಮತದಾನ ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯಸಭೆಯ ಮೂರು ಸ್ಥಾನಗಳಿಗೆ ಗುಜರಾತ್‌ ನಿಂದ ಇಂದು ನಡೆಯುತ್ತಿರುವ  ಚುನಾವಣೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ಗೆ ಭಾರಿ ಪ್ರತಿಷ್ಠೆಯ ವಿಚಾರವಾಗಿ ಪರಿಣಮಿಸಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಕಣದಲ್ಲಿರುವುದು  ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೂ ಕೂಡ ರಾಜ್ಯಸಭೆಗೆ ಸ್ಪರ್ಧಿಸಿದ್ದು, ಗುಜರಾತ್ ನಲ್ಲಿ ಬಿಜೆಪಿ ಶಾಸಕರ ಬಲ ಹೆಚ್ಚಿರುವುದರಿಂದ ಈ ಇಬ್ಬರ ಗೆಲುವು ಬಹುತೇಕ ಖಚಿತ ಎಂದು  ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್ ಪಾಲಿಗೆ ಮಾತ್ರ ರಾಜ್ಯಸಭೆ ಚುನಾವಣೆ ಈ ಹಿಂದೆಂದಿಗಿಂತಲೂ ಈ ಬಾರಿ ಕಠಿಣವಾಗಿದ್ದು, ಅಹ್ಮದ್ ಪಟೇಲ್ ಗೆಲುವಿಗೆ 45 ಸ್ಥಾನಗಳ ಅಗತ್ಯವಿದೆ. ಆದರೆ ಕಾಂಗ್ರೆಸ್ ಬಳಿ 44 ಶಾಸಕರ ಬಲ  ಮಾತ್ರವಿದ್ದು, ಗೆಲುವಿಗೆ ಇನ್ನೂ ಓರ್ವ ಶಾಸಕನ ಬೆಂಬಲ ಅಗತ್ಯವಿದೆ.

ಆದರೆ ಗುಜರಾತ್ ನಿಂದ ಕಾಂಗ್ರೆಸ್ ಮಿತ್ರ ಪಕ್ಷ ಎನ್ ಸಿಪಿ ಇಬ್ಬರು ಶಾಸಕರನ್ನು ಹೊಂದಿದ್ದು, ಈ ಇಬ್ಬರು ಶಾಸಕರು ಕಾಂಗ್ರೆಸ್ ಗೆ ಮತಹಾಕಲೇ ಬೇಕಿದೆ. ಆದರೆ ಈ ಬಗ್ಗೆ ಎನ್ ಸಿಪಿ ಯಾವುದೇ ಪ್ರಕಿಕ್ರಿಯೆ ನೀಡಿಲ್ಲ. ಇದಲ್ಲದೆ  ಜೆಡಿಯು ನ ಓರ್ವ ಶಾಸಕ ಕೂಡ ಇದ್ದು ಅವರ ಬೆಂಬಲ ಕಾಂಗ್ರೆಸ್ ಗೆ ಸಿಕ್ಕರೆ ಮಾತ್ರ ಕಾಂಗ್ರೆಸ್ ಗೆಲುವು ಸಾಧ್ಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.