ಹಳೇಯ ಚೇಲಾಗಳಗೆ ಬೆಂಬಲ ಬೇಡ, ಕಾಂಗ್ರೆಸ್ ನಿಮಗಾಗಿ ಏನೆಲ್ಲಾ ಮಾಡಿದೆ ನೆನಸಿಕೊಳ್ಳಿ: ವಘೇಲಾಗೆ ದಿಗ್ವಿಜಯ್
ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಅವರಿಗೆ ಮತ ನೀಡಬೇಕೆಂದು ದಿಗ್ವಿಜಯ್ ಸಿಂಗ್ ಪಕ್ಷದ ಹಿರಿಯ ಮುಖಂಡ ಶಂಕರ್ ಸಿಂಗ್...

Published On :
ನವದೆಹಲಿ: ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಅವರಿಗೆ ಮತ ನೀಡಬೇಕೆಂದು ದಿಗ್ವಿಜಯ್ ಸಿಂಗ್ ಪಕ್ಷದ ಹಿರಿಯ ಮುಖಂಡ ಶಂಕರ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್, ಜಾತಿ ವಿಷಯ ಕೆದಕಿದ್ದಾರೆ. ನೀವೂ ಒಬ್ಬ ರಜಪೂತ್, ದಯವಿಟ್ಟು ಅಹಮದ್ ಬಾಯ್ ಗೆಲುವಿಗಾಗಿ ಮತ ನೀಡಿ, ಕಾಂಗ್ರೆಸ್ ಪಕ್ಷ ನಿಮಗಾಗಿ ಏನೆಲ್ಲಾ ಮಾಡಿದೆ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಟ್ಟೀಟ್ ಮಾಡಿದ್ದಾರೆ.
ಏನೆ ಸಮಸ್ಯೆಗಳಿದ್ದರೂ ಪಕ್ಷದ ಒಳಗೆ ಅದನ್ನು ಚರ್ಚಿಸಿ ಬಗೆ ಹರಿಸಿಕೊಳ್ಳೋಣ. ಇಡೀ ವಿಶ್ವವನ್ನೇ ರೈಡ್ ಮಾಡಬೇಕೆಂದಿರುವ ನಿಮ್ಮ ಹಳೇಯ ಚೇಲಾವನ್ನು ಬೆಂಬಲಿಸಬೇಡಿ ಎಂದು ಹೇಳಿದ್ದಾರೆ.
ಆದರೆ ಸಿಂಗ್ ಅವರ ಮನವಿಯನ್ನು ತಿರಸ್ಕರಿಸಿರುವ ವಘೇಲಾ ತಾವು ಅಹ್ಮದ್ ಪಟೇಲ್ ಗೆ ಮತ ನೀಡಿಲ್ಲ ಎಂದು ಹೇಳಿದ್ದಾರೆ. ಈ ಚುನಾವಣೆಯ ಫಲಿತಾಂಶ ಇಡೀ ದೇಶದ ಮೇಲೆ ಪರಿಣಾಮ ಬೀರಲಿದೆ. ನಾನು ಈ ಮೋದಲೇ ಕಾಂಗ್ರೆಸ್ ಗೆ ವಿವರಿಸಿದ್ದೆ, ನನ್ನ ಮಾತನ್ನು ಕೇಳಲಿಲ್ಲ, ಹೀಗಾಗಿ ನಾನು ಕಾಂಗ್ರೆಸ್ ತೊರೆದೆ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ, ಹೀಗಾಗಿ ನಾನು ಕಾಂಗ್ರೆಸ್ ಗೆ ಮತ ನೀಡಲು ಸಾಧ್ಯವಿಲ್ಲ ಎಂದು ವಘೇಲಾ ತಿಳಿಸಿದ್ದಾರೆ.
ಕಾಂಗ್ರೆಸ್ ನ ಎಲ್ಲಾ 44 ಶಾಸಕರು ಕಾಂಗ್ರೆಸ್ ಗೆ ಮತ ಚಲಾಯಿಸುತ್ತಾರೆ ಎಂಬ ನಂಬಿಕೆಯಿಲ್ಲ, ಅವರು ಕ್ರಾಸ್ ವೊಟಿಂಗ್ ಮಾಡುವ ಸಾಧ್ಯತೆಯಿರುತ್ತದೆ, ಕಾಂಗ್ರೆಸ್ ಜಯ ಗಳಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ತಾವು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿರುವ ಬಗ್ಗೆಯೂ ವಘೇಲಾ ಸ್ಪಷ್ಟಪಡಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್ದಿಗ್ವಿಜಯ್ ಸಿಂಗ್Digvijaya Singhರಾಜ್ಯಸಭೆ ಚುನಾವಣೆRajyasabha pollsShankersinh Vaghelaಶಂಕರ್ ಸಿಂಗ್ ವಘೇಲಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


