ರಕ್ಷಾ ಬಂಧನ: ದೇಶವಾಸಿಗಳಿಗೆ ಶುಭ ಕೋರಿದ ರಾಷ್ಟ್ರಪತಿ, ಪ್ರಧಾನ ಮಂತ್ರಿ
ರಕ್ಷಾ ಬಂಧನ, ನೂಲ ಹುಣ್ಣಿಮೆಯ ಅಂಗವಾಗಿ ದೇಶದ ಜನತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು...

Published On :
ನವದೆಹಲಿ: ರಕ್ಷಾ ಬಂಧನ, ನೂಲ ಹುಣ್ಣಿಮೆಯ ಅಂಗವಾಗಿ ದೇಶದ ಜನತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ರಕ್ಷಾ ಬಂಧನದ ಈ ಶುಭ ಗಳಿಗೆಯಲ್ಲಿ ದೇಶವಾಸಿಗಳಿಗೆ ತುಂಬು ಹೃದಯದ ಶುಭಾಶಯಗಳು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸೋದರ ಸೋದರಿಯರ ನಡುವಿನ ಬಾಂಧವ್ಯದ ಬದ್ಧತೆಯನ್ನು ರಕ್ಷಾ ಬಂಧನ ಹೇಗೆ ಸಾರುತ್ತದೆ ಎಂದು ರಾಷ್ಟ್ರಪತಿ ವಿವರಿಸಿದ್ದಾರೆ. ರಕ್ಷಾ ಬಂಧನ ಪ್ರೀತಿ ಮತ್ತು ಪರಸ್ಪರ ನಂಬಿಕೆ, ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಎಂದು ಅವರು ಆಶಿಸಿದ್ದಾರೆ.
ಸೋದರ, ಸೋದರಿಯರ ನಡುವಿನ ಪ್ರೀತಿ, ಪರಸ್ಪರ ರಕ್ಷಣೆಯ ಕರ್ತವ್ಯವನ್ನು ಸಾರುವ ಸಲುವಾಗಿ ಇಂದು ರಕ್ಷಾ ಬಂಧನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಭಾರತ ಮತ್ತು ನೆರೆಯ ದೇಶ ನೇಪಾಳದಲ್ಲಿ ಈ ಆಚರಣೆ ಜೋರಾಗಿದೆ.
ರಕ್ಷಾ ಬಂಧನದ ದಿವಸ ಸೋದರಿ ತನ್ನ ಸೋದರನ ಮಣಿಕಟ್ಟಿಗೆ ಪವಿತ್ರವಾದ ನೂಲು ರಾಖಿ ಕಟ್ಟುತ್ತಾಳೆ. ಸುಖ, ಶಾಂತಿ, ಸಂತೋಷ, ಸಮೃದ್ಧಿ ಸಿಗಲೆಂದು ಆಶಿಸುತ್ತಾಳೆ. ಸೋದರಿಯ ಪ್ರೀತಿಗೆ ಸೋದರ ಏನಾದರೊಂದು ಉಡುಗೊರೆ ನೀಡಿ ಆಕೆಯನ್ನು ರಕ್ಷಿಸುವುದಾಗಿ ಮಾತು ಕೊಡುತ್ತಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿindiaಭಾರತರಾಷ್ಟ್ರಪತಿRaksha Bandhanರಕ್ಷಾ ಬಂಧನರಾಮನಾಥ್ ಕೋವಿಂದ್President Ramanath Kovind
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


