ದೇಶ

ಬಿಕ್ಕಟ್ಟುಗಳ ಪರಿಹಾರಕ್ಕೆ ಮಾತುಕತೆಯೊಂದೇ ಮಾರ್ಗ: ಪ್ರಧಾನಿ ನರೇಂದ್ರ ಮೋದಿ

ಗಟ್ಟಿಯಾಗಿ ಬೇರೂರಿರುವ ಧಾರ್ಮಿಕ ಪೂರ್ವಾಗ್ರಹಗಳನ್ನು ಹೋಗಲಾಡಿಸಲು ಇರುವ ಮಾರ್ಗ ಮಾತುಕತೆಯೊಂದೇ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಬಿಕ್ಕಟ್ಟುಗಳ ಪರಿಹಾರಕ್ಕೆ ಮಾತುಕತೆಯೊಂದೇ ಮಾರ್ಗ: ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
Published On :
ನವದೆಹಲಿ: ಗಟ್ಟಿಯಾಗಿ ಬೇರೂರಿರುವ ಧಾರ್ಮಿಕ ಪೂರ್ವಾಗ್ರಹಗಳನ್ನು ಹೋಗಲಾಡಿಸಲು ಇರುವ ಮಾರ್ಗ ಮಾತುಕತೆಯೊಂದೇ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. 
ದೇಶಗಳು, ಸಮಾಜಗಳ ನಡುವೆ ಸಂಘರ್ಷದ ಬೀಜವನ್ನು ಬಿತ್ತುವ ಧಾರ್ಮಿಕ ಪೂರ್ವಾಗ್ರಹಗಳು ಸಮುದಾಯಗಳನ್ನು ಒಡೆಯುತ್ತಿವೆ. ಆದರೆ 21 ನೇ ಶತಮಾನದಲ್ಲಿ ಇವುಗಳನ್ನು ಹೊರತುಪಡಿಸಿ ಭಯೋತ್ಪಾದನೆ, ಹವಾಮಾನ ಬದಲಾವಣೆಯಂತಹ ಅನೇಕ ಜಾಗತಿಕ ಸಮಸ್ಯೆಗಳಿವೆ, ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಇರುವುದು ಏಷ್ಯಾದ ಪುರಾತನ ವಿಧಾನವಾದ ಸಂವಹನ, ಮಾತುಕತೆಯೊಂದೇ ಪರಿಹಾರ ಎಂದು ಮೋದಿ ಹೇಳಿದ್ದಾರೆ. 
ಸಂಕೀರ್ಣ ವಿಷಯಗಳನ್ನು ಬಗೆಹರಿಸಿಕೊಳ್ಳಲು ಸಂವಾದ ಭಾರತೀಯ ಪುರಾತನ ಪದ್ಧತಿಯ ಮಾರ್ಗವಾಗಿದೆ. ಪ್ರಾಚೀನ ಭಾರತದಲ್ಲಿ ತರ್ಕ ಶಾಸ್ತ್ರ ಸಂಘರ್ಷಗಳನ್ನು ತಡೆಗಟ್ಟಲು ಹಾಗೂ ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಳ್ಳಲು ಮಹತ್ವದ ಪಾತ್ರ ವಹಿಸುತ್ತಿತ್ತು ಎಂದು ಮೋದಿ ಸಂವಾದ್-ಗ್ಲೋಬಲ್ ಇನಿಷಿಯೇಟಿವ್ ನ 2 ನೇ ಆವೃತ್ತಿಗೆ ನೀಡಿರುವ ವಿಡಿಯೋ ಸಂದೇಶದಲ್ಲಿ ಮೋದಿ ಹೇಳಿದ್ದಾರೆ. 
ಪ್ರಾಚೀನ ಭಾರತದ ಅವತಾರ ಪುರುಷರಾದ ರಾಮ, ಕೃಷ್ಣ, ಬುದ್ಧ ಹಾಗೂ ಭಕ್ತ ಪ್ರಹ್ಲಾದರೆಲ್ಲರ ನಡೆಯೂ ಧರ್ಮವನ್ನು ಎತ್ತಿ ಹಿಡಿಯುವುದಕ್ಕಾಗಿಯೇ ಆಗಿತ್ತು. ಇದೇ ಪ್ರಾಚೀನ ಕಾಲದಿಂದಲೂ ಈ ವರೆಗೆ ಭಾರತದ ಆಧಾರವಾಗಿದೆ ಎಂದು ಮೋದಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.