ಭುವನೇಶ್ವರ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ, ಉಸಿರುಗಟ್ಟಿ 5 ಮಂದಿ ಸಾವು
ಭುವನೇಶ್ವರದ ಬುದ್ದೇಶ್ವರಿ ಕಾಲೋನಿಯಲ್ಲಿರುವ ಬಹು ಮಹಡಿ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ, ಕಟ್ಟಡದೊಳಗೆ ಆವರಿಸಿದ್ದ ದಟ್ಟ ಹೊಗೆಗೆ ಉಸಿರುಗಟ್ಟಿ ಐದು ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ...

Published On :
ಭುವನೇಶ್ವರ: ಭುವನೇಶ್ವರದ ಬುದ್ದೇಶ್ವರಿ ಕಾಲೋನಿಯಲ್ಲಿರುವ ಬಹು ಮಹಡಿ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ, ಕಟ್ಟಡದೊಳಗೆ ಆವರಿಸಿದ್ದ ದಟ್ಟ ಹೊಗೆಗೆ ಉಸಿರುಗಟ್ಟಿ ಐದು ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
ಇಂದು ಬೆಳಿಗ್ಗೆ 3.30ರ ಸುಮಾರಿಗೆ ಕಟ್ಟಡದೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಳಗಿನ ಜಾವದ ನಿದ್ರೆಯಲ್ಲಿದ್ದ ಕುಟುಂಬಸ್ಥರು ಮನೆಯೊಳಗೆ ಸಿಲುಕಿ ಹಾಕಿಕೊಂಡಿದ್ದಾರೆ. ಬೆಂಕಿ ಕೆನ್ನಾಲಿಗೆ ಕಟ್ಟಡ ಸುತ್ತಲೂ ಆವರಿಸಿದ್ದರಿಂದಾಗಿ ಒಳಗೂ ಇರಲಾರದೆ, ಹೊರಗೂ ಬರಲಾರದೆ ಒಂದೇ ಕುಟುಂಬದ ನಾಲ್ವರು ಸೇರಿದಂದೆ ಒಟ್ಟು ಐದು ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರನ್ನು ಗಗನ್ ಪಾಲ್ ಸಿಂಗ್ (40), ಭಾವನಾ (38), ಸುಹಾಬಿ ಸಿಂಗ್ (15).ರುಬಿ ಸಿಂಗ್ (8), ಖುಷಿ ದಾಸ್ (15) ಎಂದು ಗುರ್ತಿಸಲಾಗಿದೆ.
ಬೆಳಿಗ್ಗೆ 5.18 ರ ಸುಮಾರಿಗೆ ಅಗ್ನಿ ಅವಘಟ ಸಂಭವಿಸಿರುವುದಾಗಿ ಮಾಹಿತಿ ತಿಳಿದುಬಂದಿತ್ತು. ಕೂಡಲೇ ಎರಡು ಅಗ್ನಿಶಾಮಕ ವಾಹನದೊಂದಿಗೆ ಸ್ಥಳಕ್ಕೆ ದೌಡಾಯಿಸಲಾಯಿತು. ಸ್ಥಳಕ್ಕೆ ಬಂದಾಗ ಕಟ್ಟಡದ ಸುತ್ತಲೂ ಬೆಂಕಿ ಆವರಿಸಿಕೊಂಡಿತ್ತು. ಮನೆಗಳ ಬಾಗಿಲುಗಳು ಒಳಗಿನಿಂದ ಲಾಕ್ ಆಗಿದ್ದವು. ನಂತರ ಕಿಟಕಿಗಳ ಗಾಜು ಒಡೆದು ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಲಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಸಂಭವಿಸಿದೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


