ದೇಶ

2011ರಲ್ಲಿ ಬಂಧಿತರಾಗಿದ್ದ 15 ಸೊಮಾಲಿ ಕಡಲ್ಗಳ್ಳರಿಗೆ 7 ವರ್ಷಗಳ ಜೈಲು ಶಿಕ್ಷೆ

ಅಪಹರಿಸಿ ಕೊಲೆ ಮಾಡಲೆತ್ನಿಸಿದ 15 ಸೊಮಾಲಿ ಕಡಲ್ಗಳ್ಳರಿಗೆ ಮುಂಬೈ ನ್ಯಾಯಾಲಯ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ...

2011ರಲ್ಲಿ ಬಂಧಿತರಾಗಿದ್ದ 15 ಸೊಮಾಲಿ ಕಡಲ್ಗಳ್ಳರಿಗೆ 7 ವರ್ಷಗಳ  ಜೈಲು ಶಿಕ್ಷೆ
ಸಾಂದರ್ಭಿಕ ಚಿತ್ರ
Published On :
ಮುಂಬೈ: ಅಪಹರಿಸಿ ಕೊಲೆ ಮಾಡಲೆತ್ನಿಸಿದ 15 ಸೊಮಾಲಿ ಕಡಲ್ಗಳ್ಳರಿಗೆ ಮುಂಬೈ ನ್ಯಾಯಾಲಯ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಅರೇಬಿಯನ್ ಸಮುದ್ರದ ಭಾರತೀಯ ಪ್ರದೇಶದಲ್ಲಿ ಉಡಾವಣಾ ರಾಕೆಟ್ ಮತ್ತು ಎಕೆ 47 ಗನ್ ಗಳೊಂದಿಗೆ ಈ ಸೊಮಾಲಿ ಕಡಲ್ಗಳ್ಳರು 2011ರಲ್ಲಿ ಬಂಧಿಸಲ್ಪಟ್ಟಿದ್ದರು.ಆರಂಭದಲ್ಲಿ ಅವರ ವಿರುದ್ಧ ಕೊಲೆ ಆರೋಪ ಕೇಳಿಬಂದಿತ್ತು. ಆದರೆ ಥೈಲ್ಯಾಂಡ್ ನಿಂದ ಸಾಕ್ಷಿದಾರರು ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡದ್ದರಿಂದ ಅವರ ವಿರುದ್ಧ ಕರಾವಳಿ ಪಡೆ ಅಧಿಕಾರಿಗಳ  ಹೇಳಿಕೆ ಪ್ರಕಾರ ಕೊಲೆ ಯತ್ನ ಆರೋಪ ದಾಖಲಾಗಿದೆ. 
ಈ ಆಪಾದಿತರು ಈಗಾಗಲೇ 6 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇನ್ನೊಂದು ವರ್ಷದಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ನ್ಯಾಯಾಲಯ ಅವರಿಗೆ ದಂಡ ಕೂಡ ವಿಧಿಸಿದೆ.
ಈ ಮಧ್ಯೆ ರಕ್ಷಣಾ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿ ಭಾರತ ಸರ್ಕಾರ ಮತ್ತು ಸೊಮಾಲಿಯಾ ಸರ್ಕಾರಗಳ ಮಧ್ಯೆ ಒಪ್ಪಂದವೇರ್ಪಟ್ಟಿದ್ದು ಅದರಂತೆ ಈ ಅಪರಾಧಿಗಳನ್ನು ಸೊಮಾಲಿಯಾಕ್ಕೆ ಮತ್ತೆ ಕಳುಹಿಸಬಹುದಾಗಿದೆ ಅಲ್ಲಿ ಅವರು ತಮ್ಮ ಜೈಲು ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಬಹುದು.

2011ರಲ್ಲಿ ಜನವರಿಯಿಂದ ಮಾರ್ಚ್ ವರೆಗೆ  ಸುಮಾರು 200 ಸೊಮಾಲಿ ಕಡಲ್ಗಳ್ಳರು ಬಂಧಿಸಲ್ಪಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.