ಖ್ಯಾತ ಸಿಎಸ್ಐಆರ್ ವಿಜ್ಞಾನಿ ಪಿ.ಎಂ. ಭಾರ್ಗವ ನಿಧನ
ಸಿಎಸ್ಐಆರ್ ಸೆಂಟರ್ ಫಾರ್ ಸೆಕ್ಯುಲರ್ ಮಾಲಿಕ್ಯುಲರ್ ಬಯೋಲಜಿ ಸ್ಥಾಪಕ ನಿರ್ದೇಶಕ, ಖ್ಯಾತ ವಿಜ್ಞಾನಿ ಪುಷ್ಪಾ ಮಿತ್ರ ಭಾರ್ಗವ (88) ಮಂಗಳವಾರ ವಿಧಿವಶರಾಗಿದ್ದಾರೆ...

Published On :
ಹೈದರಾಬಾದ್: ಸಿಎಸ್ಐಆರ್ ಸೆಂಟರ್ ಫಾರ್ ಸೆಕ್ಯುಲರ್ ಮಾಲಿಕ್ಯುಲರ್ ಬಯೋಲಜಿ ಸ್ಥಾಪಕ ನಿರ್ದೇಶಕ, ಖ್ಯಾತ ವಿಜ್ಞಾನಿ ಪುಷ್ಪಾ ಮಿತ್ರ ಭಾರ್ಗವ (88) ಮಂಗಳವಾರ ವಿಧಿವಶರಾಗಿದ್ದಾರೆ.
ಹಲವು ದಿನಗಳಿಂದಲೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಭಾರ್ಗವ ಅವರು ನಿನ್ನೆ ಸಂಜೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಪಿ.ಎಂ.ಭಾರ್ಗವ ಅವರು 1970ರ ದಶಕದಲ್ಲಿ ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಅಗ್ರಗಣ್ಯ ವಿಜ್ಞಾನಿ ಎನಿಸಿದ್ದರು. ಬಯೋಟೆಕ್ನಾಲಜಿಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ರಾಜಸ್ಥಾನದ ಅಜ್ಮೇರ್ ನಲ್ಲಿ ಜನಿಸಿದ ಅವರು 2005-07ರ ಅವಧಿಯಲ್ಲಿ ರಾಷ್ಟ್ರೀಯ ಜ್ಞಾನ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2015ರಲ್ಲಿ ಅಸಹಿಷ್ಣುತೆ ವಿರೋಧಿಸಿ ಪದ್ಮ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


