ಬೀಚ್ ಲ್ಲಿ ಕುಳಿತು ಮದ್ಯಪಾನ ಮಾಡಿದವರನ್ನು ಬಂಧಿಸಲಾಗುವುದು: ಗೋವಾ ಸರ್ಕಾರ ಎಚ್ಚರಿಕೆ
ಇನ್ನು ಮುಂದೆ ಗೋವಾಕ್ಕೆ ಹೋದರೆ ಬೀಚಿನ ಪಕ್ಕ ಕುಳಿತು ಮದ್ಯಪಾನ ಮಾಡಿದರೆ ಜೋಕೆ! ಕುಡಿದು ಮೋಜಿ ಮಸ್ತಿ....

Published On :
ಗೋವಾ: ಇನ್ನು ಮುಂದೆ ಗೋವಾಕ್ಕೆ ಹೋದರೆ ಬೀಚಿನ ಪಕ್ಕ ಕುಳಿತು ಮದ್ಯಪಾನ ಮಾಡಿದರೆ ಜೋಕೆ! ಕುಡಿದು ಮೋಜಿ ಮಸ್ತಿ ಮಾಡಿದರೆ ಅಂತವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಅಗತ್ಯ ಬಿದ್ದರೆ ಬಂಧಿಸಲೂಬಹುದು.
ಸಮುದ್ರ ತೀರಗಳು ಸ್ವಚ್ಛವಾಗಿರಬೇಕು. ಅಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯಬಾರದು. ಬೀಚ್ ಬದಿಯಲ್ಲಿ ಕುಳಿತು ಮದ್ಯಪಾನ ಮಾಡುವುದಕ್ಕೆ ಗೋವಾ ಸರ್ಕಾರ ಈಗಾಗಲೇ ನಿಷೇಧ ಹೇರಿದೆ. ಜನರ ಉಪಟಳ ಇನ್ನೂ ಜಾಸ್ತಿಯಾದರೆ ಅಂತವರನ್ನು ಬಂಧಿಸಲಾಗುವುದು ಎಂದು ಗೋವಾ ಸರ್ಕಾರದ ಪ್ರವಾಸೋದ್ಯಮ ಸಚಿವ ಮನೋಹರ್ ಅಜ್ಗಾಂವ್ಕರ್ ನಿನ್ನೆ ವಿಧಾನಸಭೆಯಲ್ಲಿ ತಿಳಿಸಿದರು.
ಬೀಚ್ ಪಕ್ಕ ಕುಳಿತು ಮದ್ಯಪಾನ ಮಾಡುವ ಕೆಲವು ಪ್ರವಾಸಿಗರು ಸಿಕ್ಕಿಬಿದ್ದಿದ್ದು ಅಂತವರ ವಿರುದ್ಧ ಪೊಲೀಸರು ಈ ಹಿಂದೆ ಕೇಸು ದಾಖಲಿಸಿದ್ದರು. ಪ್ರವಾಸಿ ವಾಣಿಜ್ಯ ಕಾಯ್ದೆಗೆ ಹೆಚ್ಚು ಅಧಿಕಾರ ನೀಡಲು ಅದಕ್ಕೆ ತಿದ್ದುಪಡಿ ತರುತ್ತೇವೆ. ಮದ್ಯ, ಮಾದಕ ವಸ್ತುಗಳನ್ನು ಮಾರಾಟ ಮಾಡದಂತೆ ಜಾಗ್ರತೆ ವಹಿಸಲು ಪ್ರವಾಸಿ ಮಾರ್ಗದರ್ಶಿಗಳಿಗೆ ಸೂಚಿಸಿದ್ದೇನೆ. ಕಾನೂನನ್ನು ತಮ್ಮಿಷ್ಟದಂತೆ ಕೈಗೆತ್ತಿಕೊಳ್ಳಲು ಜನರಿಗೆ ಬಿಡುವುದಿಲ್ಲ ಎಂದರು.
ನಿನ್ನೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಅಲೈಕ್ಸೊ ರೆಗಿನಾಲ್ಡೊ ಲಾರೆನ್ಸ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


