ದೇಶ

ಗುಜರಾತ್ ಪ್ರವಾಹ: ದೇವಾಲಯಗಳಲ್ಲಿ ತುಂಬಿದ್ದ ಹೂಳು ತೆಗೆದ ಮುಸ್ಲಿಂ ಬಾಂಧವರು

ಭೀಕರ ಪ್ರವಾಹದಿಂದಾಗಿ ಗುಜರಾತ್ ಅಕ್ಷರಶಃ ತತ್ತರಿಸಿ ಹೋಗಿದೆ. ಈ ಮಧ್ಯೆ ಮಳೆಯಿಂದಾಗಿ ಹೂಳು ತುಂಬಿದ್ದ ಹಿಂದೂ ದೇವಾಲಯಗಳನ್ನು ಮುಸ್ಲಿಂ...

ಗುಜರಾತ್ ಪ್ರವಾಹ: ದೇವಾಲಯಗಳಲ್ಲಿ ತುಂಬಿದ್ದ ಹೂಳು ತೆಗೆದ ಮುಸ್ಲಿಂ ಬಾಂಧವರು
ದೇವಾಲಯವನ್ನು ಸ್ವಚ್ಛಗೊಳಿಸುತ್ತಿರುವ ಮುಸ್ಲಿಂರು
Published On :
ಅಹಮದಾಬಾದ್: ಭೀಕರ ಪ್ರವಾಹದಿಂದಾಗಿ ಗುಜರಾತ್ ಅಕ್ಷರಶಃ ತತ್ತರಿಸಿ ಹೋಗಿದೆ. ಈ ಮಧ್ಯೆ ಮಳೆಯಿಂದಾಗಿ ಹೂಳು ತುಂಬಿದ್ದ ಹಿಂದೂ ದೇವಾಲಯಗಳನ್ನು ಮುಸ್ಲಿಂ ಸಮುದಾಯದವರು ಸ್ವಚ್ಛಗೊಳಿಸಿ ಕೋಮು ಸೌಹಾರ್ದತೆ ಮೆರೆದಿದ್ದಾರೆ. 
ಅತಿ ಹೆಚ್ಚು ಪ್ರವಾಹಕ್ಕೆ ಒಳಗಾದ ಜಿಲ್ಲೆ ಬನಸ್ಕಾಂತ. ಈ ಜಿಲ್ಲೆಯ ಧನೆರಾ ನಗರದಲ್ಲಿ ಸುಮಾರು 8ರಿಂದ 10 ಅತಿ ನೀರು ಆವರಿಸಿತ್ತು. ಪ್ರವಾಹ ಇಳಿಮುಖವಾಗಿದ್ದು ಮನೆ, ಮಸೀದಿ ಮತ್ತು ದೇವಾಲಯಗಳಲ್ಲಿ ಹೂಳು ತುಂಬಿತ್ತು. ಈ ದೇವಾಲಯಗಳಲ್ಲಿ ತುಂಬಿಕೊಂಡಿದ್ದ ಹೂಳನ್ನು ತೆಗೆಯಲು ಪಾಲಂಪುರ್ ನ ಜಮೀಯತ್ ಉಲೇಮಾ-ಎ-ಹಿಂದ್ ನ ಮುಸ್ಲಿಂ ಬಾಂಧವರು ಕೈಜೋಡಿಸಿದ್ದಾರೆ. 
ಸಿದ್ಧಿ ವಿನಾಯಕ ಗಣಪತಿ ದೇವಾಲಯದಲ್ಲಿ ಪ್ರವಾಹದಿಂದಾಗಿ ದೇವಾಲಯದಲ್ಲಿ ಹೂಳು ತುಂಬಿಕೊಂಡಿದ್ದು ನಾನು ದೇವಾಲಯವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೆ. ಈ ವೇಳೆ ನನ್ನ ಸಹಾಯಕ್ಕೆ ಬಂಧ 15 ರಿಂದ 20 ಮುಸ್ಲಿಂ ಬಾಂಧವರು ಸತತ 2 ಗಂಟೆ ಕಾಲ ದೇವಾಲಯವನ್ನು ಸ್ವಚ್ಛಗೊಳಿಸಿದರು ಎಂದು ದೇವಾಲಯದ ಪೂಜಾರಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.