ಸುಕ್ಮಾದಲ್ಲಿ 11 ನಕ್ಸಲರ ಶರಣಾಗತಿ
ಛತ್ತೀಸಗಢದ ಸುಕ್ಮಾದಲ್ಲಿ ಹನ್ನೊಂದು ನಕ್ಸಲರು ಶರಣಾಗಿದ್ದು ಈ ಪೈಕಿ ಇಬ್ಬರು ನಕ್ಸಲರ ತಲೆಗೆ ಎಂಟು ಲಕ್ಷ ಬಹುಮಾನ ಘೋಷಿಸಲಾಗಿತ್ತು...

Published On :
ಸುಕ್ಮಾ(ಛತ್ತೀಸಗಢ): ಛತ್ತೀಸಗಢದ ಸುಕ್ಮಾದಲ್ಲಿ ಹನ್ನೊಂದು ನಕ್ಸಲರು ಶರಣಾಗಿದ್ದು ಈ ಪೈಕಿ ಇಬ್ಬರು ನಕ್ಸಲರ ತಲೆಗೆ ಎಂಟು ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಮೂವರು ಮಹಿಳೆಯರು ಸೇರಿದಂತೆ ಹನ್ನೊಂದು ನಕ್ಸಲರು ಇಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಶೇಕ್ ಮೀನಾ ಅವರ ಮುಂದೆ ಶರಣಾಗಿದ್ದಾರೆ.
ಈ ಹಿಂದೆ ಸಹ ಹಲವಾರು ನಕ್ಸಲರು ಶರಣಾಗತರಾಗಿದ್ದರು. ಕಮಾಂಡರ್ ಜೆಆರ್ಡಿ ಜೆನ್ನಿ ಶಂಭು ಒಂದು ಕಂಟ್ರಿ ಪಿಸ್ತೂಲ್ ನೊಂದಿಗೆ ಜಗದಲ್ ಪುರ್ ನ ಸಿಆರ್ಪಿಎಫ್ ನ 80ನೇ ಬೆಟಾಲಿಯನ್ ಮುಂದೆ ಶರಣಾಗಿದ್ದರು. ಇನ್ನು ಕಳೆದ ಏಪ್ರಿಲ್ ನಲ್ಲಿ ಬಿಜಾಪುರದಲ್ಲಿ ಐವರು ನಕ್ಸಲರು ಶರಣಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


