ದೇಶ

ಮಹಾರಾಷ್ಟ್ರದ ಸೋಲಾಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು, ರೈಲುಗಳ ಮಾರ್ಗ ಬದಲಾವಣೆ!

ಅತ್ತ ಬಿಹಾರದಲ್ಲಿ ಗೂಡ್ಸ್ ರೈಲು ಗುದ್ದಿ 8 ಮಂದಿ ಸಾವನ್ನಪ್ಪಿರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಇತ್ತ ಮಹಾರಾಷ್ಟ್ರದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿರುವ ವಿಚಾರ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಸೋಲಾಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು, ರೈಲುಗಳ ಮಾರ್ಗ ಬದಲಾವಣೆ!
ಹಳಿ ತಪ್ಪಿದ ರೈಲು
Published On :

ಸೋಲಾಪುರ: ಅತ್ತ ಬಿಹಾರದಲ್ಲಿ ಗೂಡ್ಸ್ ರೈಲು ಗುದ್ದಿ 8 ಮಂದಿ ಸಾವನ್ನಪ್ಪಿರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಇತ್ತ ಮಹಾರಾಷ್ಟ್ರದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿರುವ ವಿಚಾರ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಸೋಲಾಪುರದ ವಾಡಿ ಡಿವಿಷನ್ ನ ದುಧಾನಿ ರೈಲ್ವೇ ನಿಲ್ದಾಣದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ್ದು, ರೈಲಿನ 5 ಬೋಗಿಗಳು ಹಳಿ ತಪ್ಪಿ ನೆಲಕ್ಕುರಳಿವೆ. ಶನಿವಾರ ತಡರಾತ್ರಿ 12.30ರ ಸಂದರ್ಭದಲ್ಲಿ ಈ ಘಟನೆ  ಸಂಭವಿಸಿದ್ದು, ಅದೃಷ್ಟಲವಶಾತ್ ಯಾವುದೇ ರೀತಿಯ ಸಾವುನೋವುಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ರೈಲು ಹಳಿ ತಪ್ಪಿದ ಪರಿಣಾಮ ಅದನ್ನು ತೆರವುಗೊಳಿಸಲು ಈ ಮಾರ್ಗದ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹೊಟಗಿ-ಗುಂಟ್ಕಲ್, ವಾಡಿ-ಲಾತುರ್ ಸೇರಿದಂತೆ ಒಟ್ಟು 12 ರೈಲುಗಳ ಮಾರ್ಗ ಬದಲಾವಣೆ  ಮಾಡಲಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ಅಧಿಕಾರಿಗಳು ರೈಲು ಬೋಗಿಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.