ದೇಶ

ದಂತೇವಾಡದಲ್ಲಿ ಇಬ್ಬರು ಕುಖ್ಯಾತ ನಕ್ಸಲರ ಬಂಧನ!

ಸುಕ್ಮಾ ದಾಳಿ ಬೆನ್ನಲ್ಲೇ ನಕ್ಸಲರ ವಿರುದ್ಧದ ಕಾರ್ಯಾಚರಣೆ ವ್ಯಾಪಕವಾಗಿದ್ದು, ಛತ್ತೀಸ್ ಘಡದ ದಂತೇವಾಡದಲ್ಲಿ ಪೊಲೀಸ್ ಅಧಿಕಾರಿಗಳು ಭಾನುವಾರ ಇಬ್ಬರು ಕುಖ್ಯಾತ ನಕ್ಸಲರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ದಂತೇವಾಡದಲ್ಲಿ ಇಬ್ಬರು ಕುಖ್ಯಾತ ನಕ್ಸಲರ ಬಂಧನ!
ಸಂಗ್ರಹ ಚಿತ್ರ
Published On :

ರಾಯ್ ಪುರ: ಸುಕ್ಮಾ ದಾಳಿ ಬೆನ್ನಲ್ಲೇ ನಕ್ಸಲರ ವಿರುದ್ಧದ ಕಾರ್ಯಾಚರಣೆ ವ್ಯಾಪಕವಾಗಿದ್ದು, ಛತ್ತೀಸ್ ಘಡದ ದಂತೇವಾಡದಲ್ಲಿ ಪೊಲೀಸ್ ಅಧಿಕಾರಿಗಳು ಭಾನುವಾರ ಇಬ್ಬರು ಕುಖ್ಯಾತ ನಕ್ಸಲರನ್ನು ಬಂಧಿಸಿದ್ದಾರೆ ಎಂದು  ತಿಳಿದುಬಂದಿದೆ.

ಬಂಧಿತರ ಪೈಕಿ ಓರ್ವ ಮೋಸ್ಟ್ ವಾಂಟೆಡ್ ಎಂದು ತಿಳಿದುಬಂದಿದ್ದು, ಈತನ ಬಂಧನಕ್ಕಾಗಿ ಈ ಹಿಂದೆ ಛತ್ತೀಸ್ ಘಡ ಪೊಲೀಸರು 2 ಲಕ್ಷ ಬಹುಮಾನ ಘೋಷಣೆ ಮಾಡಿದ್ದರು. ದಂತೇವಾಡದಲ್ಲಿ ನಕ್ಸಲರ ಇರುವಿಕೆ ಕುರಿತು ಮಾಹಿತಿ  ಕಲೆಹಾಕಿದ ಅಧಿಕಾರಿಗಳು ಕೂಡಲೇ ದಾಳಿ ಮಾಡಿ ಇಬ್ಬರು ನಕ್ಸಲರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಂಧಿತ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ವಿಚಾರಣೆ ತೀವ್ರಗೊಂಡಿದೆ.

ಇದೇ ಛತ್ತೀಸ್ ಘಡದ ಸುಕ್ಮಾದಲ್ಲಿ ಸುಮಾರು 300ಕ್ಕೂ ಅಧಿಕ ನಕ್ಸಲರು ಏಕಕಾಲದಲ್ಲಿ ದಾಳಿ ಮಾಡಿ 25ಕ್ಕೂ ಹೆಚ್ಚು ಮಂದಿಯನ್ನು ಸಿಆರ್ ಪಿಎಫ್ ಯೋಧರನ್ನು ಕೊಂದು ಹಾಕಿದ್ದರು. ಈ ಭೀಕರ ಘಟನೆ ಬಳಿಕ ದೇಶಾದ್ಯಂತ ನಕ್ಸಲ್  ನಿಗ್ರಹ ಕಾರ್ಯಚರಣೆ ಚುರುಕುಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.